ಮಾಸ್ಕೊ : ‘ಸೇನಾ ಸಲಕರಣೆಗಳನ್ನು ಜಂಟಿಯಾಗಿ ತಯಾರಿಸುವ ಯೋಜನೆ ಕುರಿತ ರಷ್ಯಾ ಹಾಗೂ ಭಾರತ ಮಾತುಕತೆಗೆ ಸ್ಪಷ್ಟ ಚಿತ್ರಣ ದೊರೆತಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲ್ಯಾವ್ರೊ ಅವರು ಬುಧವಾರ ಹೇಳಿದರು.

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಐದು ದಿನಗಳ ಕಾಲ ರಷ್ಯಾಗೆ ಪ್ರವಾಸದಲ್ಲಿದ್ದಾರೆ. ಈ ವೇಳೆ ಸೆರ್ಗೆ ಅವರೊಂದಿಗೆ ಜೈಶಂಕರ್ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸೆರ್ಗೆ ಅವರು, ‘ಸೇನಾ ಸಲಕರಣೆ ತಯಾರಿಕೆ ಕುರಿತ ಮಾತುಕತೆಯು ಎರಡೂ ದೇಶಗಳ ಹಿತಾಸಕ್ತಿಗಳ ಅನುಗುಣವಾಗಿಯೇ ಇತ್ತು’ ಎಂದು ತಿಳಿಸಿದರು.

‘ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಯುರೋಪಿಯನ್ ಆರ್ಥಿಕ ಒಕ್ಕೂಟ ಮಧ್ಯದ ಮಾತುಕತೆಯನ್ನು 2024ರ ಜನವರಿ ದ್ವಿತಿಯಾರ್ಧದಲ್ಲಿ ಪುನರಾರಂಭಿಸಲಾಗುವುದು’ ಎಂದು ಸಚಿವ ಜೈಶಂಕರ್ ತಿಳಿಸಿದರು.

ಉಕ್ರೇನ್ನಲ್ಲಿ ಯುದ್ಧ ಸಾರಿದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿವೆ. ಆದರೆ, ಭಾರತವು ರಷ್ಯಾದೊಂದಿಗೆ ಆರ್ಥಿಕವಾಗಿ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.