ಲಂಡನ್: ಇಂಗ್ಲೆಂಡ್ನಲ್ಲಿ ಶನಿವಾರರಾತ್ರಿ ನಡೆದ 2019ನೇ ಸಾಲಿನ ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿಜಮೈಕಾದ ಟೋನಿ ಅನ್ ಸಿಂಗ್ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.ಭಾರತದ ಸುಮನ್ ರಾವ್ ಮೂರನೇ ಸ್ಥಾನ ಪಡೆದರು.

ಕಳೆದ ವರ್ಷ ಆಯ್ಕೆಯಾಗಿದ್ದಭಾರತದ ಮಾನುಷಿ ಚಿಲ್ಲರ್ ಅವರಿಂದವಿಶ್ವಸುಂದರಿ ಕಿರೀಟವನ್ನು ಅನ್ ಸಿಂಗ್ ಮುಡಿಗೇರಿಸಿಕೊಂಡರು.

ಲಂಡನ್ನಲ್ಲಿ 69ನೇ ಆವೃತ್ತಿಯವಿಶ್ವಸುಂದರಿ ಸ್ಪರ್ಧೆ ಕಳೆದನವೆಂಬರ್ 20ರಂದು ಆರಂಭವಾಗಿತು. ಈ ಬಾರಿ 120 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಅನೇಕ ಸುತ್ತುಗಳ ಬಳಿಕ 10 ಸ್ಪರ್ಧಿಗಳನ್ನು ಫೈನಲ್ಗೆ ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಜಮೈಕಾದಟೋನಿ ಅನ್ ಸಿಂಗ್, ಭಾರತದ ಸುಮನ್ ರಾವ್, ಫ್ರಾನ್ಸ್ ದೇಶದ ಓಪ್ಲೆ ಮೇಜಿನೊಪೈನಲ್ ಸುತ್ತಿನ ಕೊನೆಯ ಹಂತಕ್ಕೆ ಪ್ರವೇಶ ಪಡೆದಿದ್ದರು.

ಅಂತಿಮವಾಗಿ23ರ ಹರೆಯದಜಮೈಕಾದ ಟೋನಿ ಅನ್ ಸಿಂಗ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.ಓಪ್ಲೆ ಮೇಜಿನೊ ಮತ್ತು ಸುಮನ್ ರಾವ್ ಕ್ರಮವಾಗಿ ಮೊದಲನೇ ಮತ್ತು ಎರಡನೇ ರನ್ನರ್ ಅಪ್ ಆದರು.

ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿಟೋನಿ ಅನ್ ಸಿಂಗ್ ಮನೋವಿಜ್ಞಾನ ಅಭ್ಯಾಸ ಮಾಡುತ್ತಿದ್ದಾರೆ.ಜಮೈಕಾದ 4ನೇ ವಿಶ್ವಸುಂದರಿ ಎಂಬ ಖ್ಯಾತಿ ಪಡೆದಿರುವ ಅನ್ ಸಿಂಗ್ ಅವರಿಗೆ ಹಾಡು ಕೇಳುವುದು, ಅಡುಗೆ ಮಾಡುವುದು ಹಾಗೂ ಸೆಲ್ಫೀ ವಿಡಿಯೊ ಮಾಡುವುದೆಂದರೆ ಇಷ್ಟವಂತೆ. ಹಾಲಿವುಡ್ ಚಿತ್ರಗಳಲ್ಲಿ ನಟಿಸಬೇಕು ಎಂಬ ಕನಸುಅನ್ ಸಿಂಗ್ ಅವರದ್ದು.

ಎರಡನೇ ರನ್ನರ್ ಅಪ್ ಆಗಿರುವ ಭಾರತ ಸುಮನ್ ರಾವ್ ಈಗಾಗಲೇಮಿಸ್ ಇಂಡಿಯಾ 2019 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 20ರ ಹರೆಯದ ಸುಮನ್ ಅಂತಿಮ ಸುತ್ತಿಗೆ ತೆರಳಿ ವಿಶ್ವಸುಂದರಿ ಕಿರೀಟ ಧರಿಸುವಲ್ಲಿ ವಿಫಲರಾದರು. ಮಾಡೆಲಿಂಗ್ ಕ್ಷೇತ್ರದಲ್ಲಿರುವ ಸುಮನ್ ನಟಿಯಾಗಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.