ಪಿಡೀ (ಇಂಡೊನೇಷ್ಯಾ): ಎರಡು ದಿನಗಳ ಅಂತರದಲ್ಲಿ ರೋಹಿಂಗ್ಯಾ ನಿರಾಶ್ರಿತರ ಎರಡನೇ ತಂಡ ಇಂಡೊನೇಷ್ಯಾದ ಉತ್ತರದ ಅಚೆಹ್ ಪ್ರಾಂತ್ಯದ ಕಡಲ ತೀರಕ್ಕೆ ಸೋಮವಾರ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರಾಶ್ರಿತರು ಹಲವು ವಾರಗಳಿಂದ ಪ್ರಯಾಣ ನಡೆಸಿರುವುದರಿಂದ ದಣಿದು, ದುರ್ಬಲಗೊಂಡಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 185 ಜನರುಮರದ ದೋಣಿಯಲ್ಲಿ ಬಂದುಪಿಡೀ ಜಿಲ್ಲೆಯ ಕರಾವಳಿ ಗ್ರಾಮವಾದ ಮುರಾ ಟಿಗಾದಲ್ಲಿನ ಉಜೊಂಗ್ ಪೈ ಬೀಚ್ನಲ್ಲಿ ಸೋಮವಾರ ಮುಸ್ಸಂಜೆ ವೇಳೆ ಇಳಿದಿದ್ದಾರೆ.ವಾರಗಟ್ಟಲೆ ಸಮುದ್ರದಲ್ಲಿಯೇ ಇದ್ದದ್ದರಿಂದ ಅವರೆಲ್ಲರೂ ದುರ್ಬಲಗೊಂಡಿದ್ದು,ನಿರ್ಜಲೀಕರಣದಿಂದ ಬಳಲಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಫೌಜಿ ಹೇಳಿದ್ದಾರೆ.

ಎಲ್ಲರನ್ನೂ ಗ್ರಾಮದಲ್ಲಿರುವ ಸಭಾಂಗಣಕ್ಕೆ ಕರೆದೊಯ್ಯಲಾಗಿದ್ದು, ಗ್ರಾಮದ ನಿವಾಸಿಗಳು, ಆರೋಗ್ಯ ಕಾರ್ಯಕರ್ತರು ನೆರವಾಗಲಿದ್ದಾರೆ.

ದೋಣಿಯೊಂದು ತಿಂಗಳಿಗೂ ಹೆಚ್ಚು ಸಮಯದಿಂದಅಂಡಮಾನ್ ಸಮುದ್ರದಲ್ಲಿಅಲೆಯುತ್ತಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ವರದಿ ಮಾಡಿತ್ತು. ಸದ್ಯ ಆಗಮಿಸಿರುವ ರೋಹಿಂಗ್ಯಾಗಳು ಅದೇ ದೋಣಿಯಲ್ಲಿ ಇದ್ದವರೇ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದೂ ಫೌಜಿ ತಿಳಿಸಿದ್ದಾರೆ.

ದೇಶಗಳು ನಿರಾಶ್ರಿತರನ್ನು ರಕ್ಷಿಸಬೇಕು ಎಂದುನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್ (ಯುಎನ್ಎಚ್ಸಿಆರ್) ಒತ್ತಾಯಿಸಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು 20 ಮಂದಿ ಪ್ರಯಾಣದ ಸಮಯದಲ್ಲಿ ಮೃತಪಟ್ಟಿರಬಹುದು ಎಂದೂ ಕಳವಳ ವ್ಯಕ್ತಪಡಿಸಿದೆ.

58 ಜನರಿದ್ದ ನಿರಾಶ್ರಿತರಿದ್ದ ಮತ್ತೊಂದು ತಂಡ ಶುಕ್ರವಾರವಷ್ಟೇ ಇದೇ ಪ್ರಾಂತ್ಯದ ಬೇಸರ್ ಜಿಲ್ಲೆಯ ಲಡಾಂಗ್ ಗ್ರಾಮ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.