ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಅವರು ಸೋಮವಾರ (ಮೇ.20) ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಜನತಾ ಸಮಾಜವಾದಿ ಪಕ್ಷವು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮೇ 13ರಂದು ಹಿಂಪಡೆದಿರುವ ಕಾರಣ ಪ್ರಚಂಡ ಅವರಿಗೆ ವಿಶ್ವಾಸಮತ ಸಾಬೀತು ಮಾಡುವ ಸವಾಲು ಎದುರಾಗಿದೆ. ಪ್ರಚಂಡ ಅವರು ಪ್ರತಿನಿಧಿಸುವ ನೇಪಾಳದ ಕಮ್ಯುನಿಸ್ಟ್ ಪಕ್ಷವು (ಮಾವೋವಾದಿ ಕೇಂದ್ರ) ಸಂಸತ್ತಿನಲ್ಲಿ ಮೂರನೇ ಅತಿ ದೊಡ್ಡ ಪಕ್ಷವಾಗಿದೆ.

ಪ್ರಚಂಡ ಅವರು ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ಇದು ನಾಲ್ಕನೇ ಬಾರಿ ವಿಶ್ವಾಸಮತದ ಪರೀಕ್ಷೆ ಎದುರಿಸುತ್ತಿದ್ದಾರೆ. ಒಟ್ಟು 275 ಸದಸ್ಯರಿರುವ ಸಂಸತ್ತಿನಲ್ಲಿ ಪ್ರಚಂಡ ಸರ್ಕಾರಕ್ಕೆ ಕನಿಷ್ಠ 138 ಸದಸ್ಯರ ಬೆಂಬಲ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.