ಕಠ್ಮಂಡು: ನೇಪಾಳದ ಆಡಳಿತಾರೂಢ ಮೈತ್ರಿಕೂಟದಿಂದ ಹೊರಬರಲು ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್ಎಸ್ಪಿ) ಭಾನುವಾರ ನಿರ್ಧರಿಸಿದೆ. ಆರ್ಎಸ್ಪಿ ಪಕ್ಷದ ಅಧ್ಯಕ್ಷ ರಾಬಿ ಲಾಮೀಛಾನೆ ಅವರಿಗೆ ಗೃಹ ಖಾತೆಯನ್ನು ಪುನಃ ನೀಡುವುದಕ್ಕೆ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ಅವರು ನಿರಾಕರಿಸಿರುವುದಕ್ಕೆ ಪಕ್ಷ ಈ ನಿರ್ಧಾರ ಕೈಗೊಂಡಿದೆ.

ಆರ್ಎಸ್ಪಿಯ ಕೇಂದ್ರ ನಾಯಕರು ಹಾಗೂ ಶಾಸಕರ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಲಾಮೀಛಾನೆ ಅವರು, ಚಿತ್ವಾನ್–2 ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಚುನಾವಣೆ ವೇಳೆ ಅವರು ಸಲ್ಲಿಸಿದ್ದ ಪೌರತ್ವ ಪ್ರಮಾಣಪತ್ರವು ಅಸಿಂಧು ಎಂದು ಜ.27ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿ, ಲಾಮೀಛಾನೆ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದರು ಎಂದು ಇಲ್ಲಿನ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಶಾಸಕ ಸ್ಥಾನ ರದ್ದಾಗಿದ್ದರಿಂದಾಗಿ, ಲಾಮೀಛಾನೆ ಅವರು ಸಚಿವ ಸ್ಥಾನದಿಂದಲೂ ಪಕ್ಷದ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಯಬೇಕಾಯಿತು.

‘ಈ ಬಳಿಕ ಜ.29ರಂದು ಲಾಮೀಛಾನೆ ಅವರು ತಮ್ಮ ಪೌರತ್ವವನ್ನು ಮರಳಿ ಪಡೆದುಕೊಂಡರು. ಇದಾದ ಬಳಿಕ ಅವರು ಪ್ರಧಾನಿ ಪ್ರಚಂಡ ಅವರನ್ನು ಭೇಟಿಯಾಗಿ, ಸಚಿವ ಸ್ಥಾನವನ್ನು ಮರಳಿ ಕೊಡುವಂತೆ ಮನವಿ ಮಾಡಿದ್ದರು. ಆದರೆ, ಪ್ರಧಾನಿ ಪ್ರಚಂಡ ಅವರು ಇದಕ್ಕೆ ಆಸಕ್ತಿ ತೋರಲಿಲ್ಲ’ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.