ವಾಷಿಂಗ್ಟನ್: ಮರೆಗುಳಿ (ಆಲ್ಝೈಮರ್) ಕಾಯಿಲೆಯನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವ ಪೊಸಿಟ್ರಾನ್ ಎಮಿಷನ್ ಟೋಮೊಗ್ರಫಿ (ಪಿಇಟಿ)ಇಮೇಜಿಂಗ್ ತಂತ್ರವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಪಿಇಟಿಯು ಆಲ್ಝೈಮರ್ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳನ್ನು ಕಂಡುಹಿಡಿಯಲಿದೆ. ಅಲ್ಲದೇ, ಸಮಯೋಚಿತವಾಗಿ ರೋಗ ನಿರ್ಣಯಿಸಿ, ಸರಿಯಾದ ಚಿಕಿತ್ಸೆ ಪಡೆಯಲೂ ನೆರವಾಗಲಿದೆ.

ಇದರ ಸಂಶೋಧನಾ ವರದಿಯು‘ನ್ಯೂಕ್ಲಿಯರ್ ಮೆಡಿಸಿನ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಈತಂತ್ರವು 18ಎಫ್-ಎಸ್ಎಂಬಿಟಿ -1 ಹೆಸರಿನ ರೇಡಿಯೊಟ್ರೇಸರ್ ಒಳಗೊಂಡಿರುತ್ತದೆ. ಇದುಆಲ್ಝೈಮರ್ನ ಆರಂಭಿಕ ಲಕ್ಷಣಗಳಲ್ಲಿ ಒಂದಾದ ವ್ಯಕ್ತಿಗಳಲ್ಲಿನ ಅತಿಭಾವುಕತೆಯ ಮೋನೊಮೈನ್ ಆಕ್ಸಿಡೇಸ್-ಬಿ (ಎಂಎಒ–ಬಿ) ಕಿಣ್ವವನ್ನು ಪತ್ತೆಹಚ್ಚುತ್ತದೆ ಎಂದು ವರದಿ ಹೇಳಿದೆ.

ಆಲ್ಝೈಮರ್ ರೋಗ ನಿರ್ಣಯ, ರೋಗದ ಹಂತ ಹಾಗೂ ರೋಗಕ್ಕೆ ಕಾರಣವಾದ ಅಂಶಗಳನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯ ಪ್ರಮುಖ ಲೇಖಕ, ಅಮೆರಿಕದ ಪೀಟ್ಸ್ಬರ್ಗ್ ವಿಶ್ವವಿದ್ಯಾಲಯದ ವಿಕ್ಟರ್ ವಿಲ್ಲೆಮ್ಯಾಗ್ನೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.