ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ದಕ್ಷಿಣ ಆಫ್ರಿಕಾದ ಮಹಿಳೆ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕಳೆದ ತಿಂಗಳು 9 ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಾಲಿಯ ಮಹಿಳೆಹಲಿಮಾ ಸಿಸ್ಸೆ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಗೊಸಿಯಮೆ ಥಾಮರಾ ಸಿತೋಲ್ ಮುರಿದಿದ್ದಾರೆ.

37 ವರ್ಷದ ಗೊಸಿಯಮೆ ಥಾಮರಾ ಸಿತೋಲ್ ಎಂಟು ಮಕ್ಕಳು ಜನಿಸಬಹುದೆಂದು ಊಹಿಸಿದ್ದರು. ಆದರೆ ಸೋಮವಾರ ರಾತ್ರಿ ಡೆಲಿವರಿಯಾದಾಗ ಹತ್ತು ಮಕ್ಕಳು ಜನಿಸಿದ್ದು ಕಂಡು ಗೊಸಿಯಮೆ ಮತ್ತು ಅವರ ಕುಟುಂಬಕ್ಕೆ ಅಚ್ಚರಿಯಾಗಿದೆ.

ಏಳು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು ಜನಿಸಿವೆ. ಡೆಲಿವರಿ ಸಮಯಕ್ಕೆ ಏಳು ತಿಂಗಳು ಮತ್ತು ಏಳು ದಿನಗಳ ಗರ್ಭಿಣಿಯಾಗಿದ್ದರು. ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ತುಂಬಾ ಭಾವುಕನಾಗಿದ್ದೇನೆ ಎಂದು ಗೊಸಿಯಮೆ ಅವರ ಪತಿ ತೆಬೊಹೊ ಸೊಟೆಟ್ಸಿ ಮಾಧ್ಯಮಕ್ಕೆ ಹೇಳಿದ್ದಾರೆ.

ನಿಯಮಿತವಾಗಿ ತಾರತಮ್ಯ ಎದುರಿಸುತ್ತಿರುವ ಭಾರತೀಯ- ಅಮೆರಿಕನ್ನರು: ವರದಿ

ನಾನು ಹತ್ತು ಮಕ್ಕಳ ಗರ್ಭಿಣಿಯಾಗಿದ್ದಾಗ ಸಾಮಾನ್ಯ ಗರ್ಭಿಣಿಯರಂತೆ ಇದ್ದೆ. ಯಾವುದೇ ಫರ್ಟಿಲಿಟಿ ಚಿಕಿತ್ಸೆ ಪಡೆದಿಲ್ಲ ಎಂದು ಗೌಟೆಂಗ್ ಪ್ರದೇಶದ ಸಿತೋಲ್ ಹೇಳಿದ್ದಾರೆ. ಸಿತೋಲ್ ಅವರಿಗೆ ಈಗಾಗಲೇ 6 ವರ್ಷದ ಅವಳಿ ಮಕ್ಕಳಿದ್ದಾರೆ.

10 ಮಕ್ಕಳಿಗೆ ಜನ್ಮ ನೀಡಿದ ಸುದ್ದಿಯನ್ನು ತಿಳಿದ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಅಭಿನಂದನೆ ಕೋರಿದೆ. ವಿಶ್ವ ದಾಖಲೆಯೆಂದು ಪರಿಗಣಿಸಲು ಅಗತ್ಯ ಪ್ರಕ್ರಿಯೆ ನಡೆಸಿದೆ.

ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೋವಿಡ್ -19 ಲಸಿಕೆ ನೀಡಲು ಮುಂದಾದ ಚೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.