ಬ್ಯಾಂಕಾಕ್: ಆಗ್ನೇಯ ಲಾವೋಸ್‌ನಲ್ಲಿ ಅಣೆಕಟ್ಟೆ ದುರಂತದಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸುಮಾರು 3,000 ಜನರನ್ನು ಪ್ರವಾಹಪೀಡಿತ ಪ್ರದೇಶಗಳಿಂದ ರಕ್ಷಿಸಬೇಕಿದೆ. 2,500ಕ್ಕೂ ಹೆಚ್ಚು ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಉತ್ಪಾದನಾ ಅಣೆಕಟ್ಟೆ ಭಾರಿ ಮಳೆಯಿಂದಾಗಿ ಸೋಮವಾರ ಸಂಜೆ ಒಡೆದ ಪರಿಣಾಮ ಹತ್ತಾರು ಗ್ರಾಮಗಳು ಭಾಗಶಃ ನೀರಿನಲ್ಲಿ ಮುಳುಗಡೆಯಾಗಿದ್ದವು.

ದುರಂತಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ವರದಿಯ ಪ್ರಕಾರ, 357 ಗ್ರಾಮಗಳ 11,777 ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಪೈಕಿ, 34 ಮಂದಿ ಕಣ್ಮರೆಯಾಗಿದ್ದರೆ 1,494 ಜನರನ್ನು ರಕ್ಷಿಸಲಾಗಿದೆ.

ಪ್ರವಾಹದಿಂದಾಗಿ ಕನಿಷ್ಠ 7 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ನೂರಾರು ಮನೆಗಳು ನೀರಿನಿಂದಾವೃತಗೊಂಡಿದ್ದು, ಗ್ರಾಮಸ್ಥರು ಚಿಕ್ಕ ಮಕ್ಕಳೊಂದಿಗೆ ಮನೆಯ ಮಾಡಿನ ಮೇಲೆ ಸಹಾಯ ಯಾಚಿಸುವ, ಮರದ ತೆಪ್ಪಗಳಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸುತ್ತಿರುವ ದೃಶ್ಯಗಳನ್ನು ಅಲ್ಲಿನ ಮಾಧ್ಯಮಗಳು ಪ್ರಕಟಿಸಿವೆ.

ಕಾಂಬೋಡಿಯಾ ಗಡಿಯಲ್ಲಿರುವ ಅಣೆಕಟ್ಟೆ ಇದಾಗಿದ್ದು, ಸೋಮವಾರ ಸಂಜೆ ದುರ್ಘಟನೆ ಸಂಭವಿಸಿದೆ. ಅಣೆಕಟ್ಟೆ ಒಡೆದ ಪರಿಣಾಮ ಐದು ದಶಲಕ್ಷ ಕ್ಯೂಸೆಕ್ ಮೀಟರ್ ನೀರು ಹೊರ ಹರಿದಿದೆ ಎಂದು ಲಾವೋಸ್ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿತ್ತು.

ಇದನ್ನೂ ಓದಿ:ಲಾವೋಸ್: ಅಣೆಕಟ್ಟೆ ಒಡೆದು 100ಕ್ಕೂ ಹೆಚ್ಚು ಜನ ಕಣ್ಮರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.