ವಾಷಿಂಗ್ಟನ್: ಅಮೆರಿಕದ ವಾಯುಗಡಿ ಪರಿಮಿತಿ ಪ್ರವೇಶಿಸಿದ್ದ, ಸೇನೆಯು ಹೊಡೆದುರುಳಿಸಿದ್ದ ಮೂರು ಶಂಕಿತ ವಸ್ತುಗಳಿಗೂ ಚೀನಾದ ಕಣ್ಗಾವಲು ಬಲೂನ್‌ಗೂ ಸಂಬಂಧವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಈ ವಸ್ತುಗಳು ಬಹುತೇಕ ಖಾಸಗಿ ಕಂಪನಿಗಳು, ಸಂಶೋಧನಾ ಸಂಸ್ಥೆಗಳಿಗೆ ಸೇರಿದ್ದಾಗಿರಬಹುದು ಎಂದಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಅಮೆರಿಕ, ಕೆನಡಾದ ಸೇನೆಯು ಶಂಕಿತ ವಸ್ತುಗಳ ಅವಶೇಷಗಳ ಸಂಗ್ರಹದಲ್ಲಿ ತೊಡಗಿದೆ ಎಂದರು.

ಈ ಬೆಳವಣಿಗೆ ಕುರಿತು ನಿತ್ಯ ಮಾಹಿತಿ ಪಡೆಯಲಾಗುತ್ತಿದೆ. ಈ ಅಪರಿಚಿತ ವಸ್ತುಗಳು ಏನು ಎಂಬುದು ಖಚಿತವಾಗಿ ನಮಗೆ ಗೊತ್ತಿಲ್ಲ. ಆದರೆ, ಚೀನಾಗೆ ಸೇರಿದ್ದು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ವಿಸ್ತೃತವಾಗಿ ಪರಿಶೀಲಿಸಲು ಸೂಚಿಸಲಾಗಿದೆ ಎಂದರು.

ಓದಿ... ಅಮೆರಿಕದ ಬಲೂನ್ಗಳು ಚೀನಾದ ಮೇಲೆ 10 ಬಾರಿ ಹಾರಾಟ: ಚೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.