ಸೋಲ್: ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಮಧ್ಯೆ ಕ್ಷಿಪಣಿಗಳಶೀತಲ ಸಮರ ಮುಂದುವರಿದಿದೆ. ಉತ್ತರ ಕೊರಿಯಾ ಒಂದು ಖಂಡಾಂತರ ಕ್ಷಿಪಣಿ(ಐಸಿಬಿಎಂ) ಸೇರಿ ನಾಲ್ಕು ಕ್ಷಿಪಣಿಗಳನ್ನು ಗುರುವಾರ ಉಡಾಯಿಸಿದೆ.

ಶಸ್ತ್ರಾಸ್ತ್ರಗಳ ಪೈಪೋಟಿಯ ಪ್ರದರ್ಶನವು ಮುಂಬರುವ ವಾರಗಳಲ್ಲಿ ಅಣ್ವಸ್ತ್ರಕ್ಷಿಪಣಿಯೊಂದಿಗೆ ಅಂತ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕೊರಿಯಾವು ತನ್ನ ಪೂರ್ವದ ಕರಾವಳಿ ತೀರಕ್ಕೆ ಐಸಿಬಿಎಂ ಉಡಾಯಿಸಿದ ನಂತರ ಜಪಾನ್‌ನ ಉತ್ತರದ ಭಾಗದಲ್ಲಿ ಮೀನುಗಾರರಿಗೆ ದಡಕ್ಕೆ ವಾಪಸಾಗುವಂತೆ ಮೊಬೈಲ್, ರೆಡಿಯೊ ಮತ್ತು ಧ್ವನಿವರ್ಧಕಗಳಿಂದ ಸೂಚನೆ ನೀಡಲಾಯಿತು.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿರುವ ಜಂಟಿ ವೈಮಾನಿಕ ತಾಲೀಮನ್ನು ಆಕ್ರಮಣ ಸಿದ್ಧತೆ ಎಂದು ಭಾವಿಸಿರುವ ಉತ್ತರ ಕೊರಿಯಾ, ‘ಉಭಯರಾಷ್ಟ್ರಗಳೂ ಇತಿಹಾಸ ಕಂಡರಿಯದ ಬೆಲೆ ತೆರಬೇಕಾಗುತ್ತದೆ. ಅಣ್ವಸ್ತ್ರ ದಾಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ ಕೆಲವೇ ಹೊತ್ತಿನಲ್ಲಿಬುಧವಾರ 25 ಕ್ಷಿಪಣಿಗಳನ್ನು ಉಡಾಯಿಸಿತ್ತು.

ಇದರಲ್ಲಿ ಒಂದು ಕ್ಷಿಪಣಿ ದಕ್ಷಿಣ ಕೊರಿಯಾದ ಕಡಲ ಜಲಗಡಿಗೆ ಅಪ್ಪಳಿಸಿತ್ತು.ಇದಕ್ಕೆ ದಕ್ಷಿಣ ಕೊರಿಯಾ ಕೂಡ ತನ್ನ ಗಡಿಯಲ್ಲಿ ಕ್ಷಿಪಣಿ ಉಡಾಯಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.