ಸ್ಟಾಕ್ಹೋಮ್: ನಾರ್ವೆ ಬರಹಗಾರ ಹಾಗೂ ನಾಟಕಕಾರ ಜಾನ್ ಫಾಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯನ್ನು ಘೋಷಿಸಿದ ಸ್ವೀಡಿಶ್ ಅಕಾಡೆಮಿಯು, ‘ಜಾನ್ ಅವರ ನಾಟಕ ಹಾಗೂ ಬರಹಗಳು ಧ್ವನಿ ಇಲ್ಲದವರಿಗೆ ದನಿಯಾಗಿವೆ’ ಎಂದು ಬಣ್ಣಿಸಿದೆ.

ವೈದ್ಯಕೀಯ ಹಾಗೂ ಭೌತ ವಿಜ್ಞಾನ ಕ್ಷೇತ್ರದ ಪ್ರಶಸ್ತಿಯನ್ನು ಮಂಗಳವಾರ ಪ್ರಕಟಿಸಲಾಗಿತ್ತು. ರಸಾಯನ ವಿಜ್ಞಾನ ಕ್ಷೇತ್ರದ ಪ್ರಶಸ್ತಿ ಬುಧವಾರ ಪ್ರಕಟಗೊಂಡಿತ್ತು. ಅವುಗಳಂತೆಯೇ ಈ ಪ್ರಶಸ್ತಿಯೂ 10 ಲಕ್ಷ ಅಮೆರಿಕನ್ ಡಾಲರ್ ಮೊತ್ತ ಹಾಗೂ 18 ಕ್ಯಾರೆಟ್ ಚಿನ್ನದ ಪದಕವನ್ನು ಒಳಗೊಂಡಿದೆ. ಸ್ವೀಡಿಶ್ ಸೆಂಟ್ರಲ್ ಬ್ಯಾಂಕ್ ಆರಂಭಿಸಿದ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯ ವಿಜೇತರ ಹೆಸರು ಇನ್ನಷ್ಟೇ ಘೋಷಣೆಯಾಗಬೇಕಿದೆ.

ನೊಬೆಲ್ ಪ್ರಶಸ್ತಿಯಲ್ಲಿ ಶಾಂತಿ ಮತ್ತು ಸಾಹಿತ್ಯ ವಿಭಾಗದ ಪ್ರಶಸ್ತಿಗಳು ಹೆಚ್ಚು ಗಮನ ಸೆಳೆದಿವೆ. ಕೆಲವೊಮ್ಮೆ ಇವು ವಿವಾದ ಹುಟ್ಟುಹಾಕಿದ್ದೂ ಇದೆ. ಹೀಗಾಗಿ ಕಾದಂಬರಿಕಾರರು, ನಾಟಕ ಬರಹಗಾರರು, ಇತಿಹಾಸಕಾರರು, ತತ್ವಶಾಸ್ತ್ರಜ್ಞರು ಮತ್ತು ಕವಿಗಳಿಗಿಂತ ಭಿನ್ನವಾಗಿ ಸಾಧನೆ ಮಾಡಿದವರನ್ನು ಸಾಹಿತ್ಯ ಕ್ಷೇತ್ರಕ್ಕೆ ಆಯ್ಕೆ ಮಾಡುವ ಪರಿಪಾಠ ಕಳೆದ ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. 2016ರಲ್ಲಿ ಗೀತ ಸಾಹಿತಿ– ಹಾಡುಗಾರ ಬಾಬ್ ಡೈಲನ್ ಅವರು ಸಾಹಿತ್ಯ ಪ್ರಶಸ್ತಿ ಪಡೆದಿದ್ದರು. 2022ರ ನೊಬೆಲ್ ಪ್ರಶಸ್ತಿಯು ಅನ್ನೀ ಎರ್ನಾಕ್ಸ್ ಅವರಿಗೆ ಲಭಿಸಿತ್ತು. ಆ ಮೂಲಕ ಪ್ರತಿಷ್ಠಿತ ಪ್ರಶಸ್ತಿ ಪಡೆದ ಫ್ರಾನ್ಸ್ನ ಮೊದಲ ಮಹಿಳೆ ಎಂದೆನಿಸಿಕೊಂಡರು.
.Nobel Prize | ಸುಕುರೊ ಮನಬೆ ಸೇರಿ ಮೂವರು ವಿಜ್ಞಾನಿಗಳಿಗೆ ‘ಭೌತವಿಜ್ಞಾನ ನೊಬೆಲ್’.Quantum Dots ಶೋಧ: ಅಮೆರಿಕದ ಮೂವರು ರಸಾಯನ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.