ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬದ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಸಿದ್ದ ‘ದಿ ನ್ಯೂಯಾರ್ಕ್ ಟೈಮ್ಸ್’ ಹಾಗೂ ‘ದಿ ವಾಲ್‌ಸ್ಟ್ರೀಟ್ ಜರ್ನಲ್’ಗೆ ಈ ಬಾರಿಯ ಪುಲಿಟ್ಜರ್ ಪ್ರಶಸ್ತಿ (ಪತ್ರಿಕೋದ್ಯಮ ವಿಭಾಗ) ದೊರಕಿದೆ.

‘ಟ್ರಂಪ್ ಕುಟುಂಬದ ಹಣಕಾಸು ವ್ಯವಹಾರ ಕುರಿತು ವಿವರಣಾತ್ಮಕವಾದ ತನಿಖಾ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಈಪ್ರಶಸ್ತಿ ನೀಡಲಾಗಿದೆ’ ಎಂದು ಪುಲಿಟ್ಜರ್ ಪ್ರಶಸ್ತಿ ಮಂಡಳಿ ತಿಳಿಸಿದೆ.

ಟ‌್ರಂಪ್ ಅವರ ಸ್ವಯಂ ಗಳಿಕೆಯಆಸ್ತಿ ವಿವರಗಳು ಹಾಗೂ ಅವರ ಒಡೆತನದ ಉದ್ದಿಮೆಗಳುಸಾಕಷ್ಟು ತೆರಿಗೆ ವಂಚನೆ ಮಾಡಿರುವ ವಿಷಯವನ್ನು ವರದಿ ಬಯಲಿಗೆಳೆದಿತ್ತು. 2016ರಲ್ಲಿ ತಮ್ಮ ಅಧ್ಯಕ್ಷೀಯ ಚುನಾವಣೆ ವೇಳೆ ಇಬ್ಬರು ಮಹಿಳೆಯರಿಗೆ ಗೋಪ್ಯವಾಗಿ ಹಣ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಪತ್ರಿಕೆ ಕುರಿತು ಪ್ರಶಂಸೆ ವ್ಯಕ್ತವಾಗಿತ್ತು.

ಯೆಮೆನ್‌ನ ಯುದ್ಧ ಕುರಿತು ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ‘ದಿ ಅಸೋಸಿಯೇಟೆಡ್ ಪ್ರೆಸ್’, ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧದ ದೌರ್ಜನ್ಯಗಳನ್ನು ವರದಿ ಮಾಡಿದ್ದಕ್ಕಾಗಿ ‘ರಾಯಿಟರ್ಸ್’ ಅಂತರರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿಪ್ರಶಸ್ತಿ ಗಳಿಸಿವೆ.

ಫಾರೆಸ್ಟ್ ಗ್ಯಾಂಡರ್ ಅವರ ‘ಬಿ ವಿತ್’ ಕೃತಿ ಕವನ ವಿಭಾಗದಲ್ಲಿ, ಡೇವಿಡ್ ಬ್ಲೈಟ್ ಅವರ ‘ಫ್ರೆಡರಿಕ್ ಡಗ್ಲಾಸ್: ಪ್ರಾಫೆಟ್ ಆಫ್ ಫ್ರೀಡಂ’ಗೆ ಇತಿಹಾಸ ವಿಭಾಗದಲ್ಲಿ, ಜೆಫ್ರಿ ಸ್ಟಿವಾರ್ಟ್ ಅವರ ‘ದಿ ನ್ಯೂ ನಿಗ್ರೊ: ದಿ ಲೈಫ್ ಆಫ್ ಏಷಿಯನ್ ಲಾಕ್’ಗೆಜೀವನ ಚರಿತ್ರೆ ವಿಭಾಗದಲ್ಲಿ ಪ್ರಶಸ್ತಿ ದೊರಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.