ರಿಯೊ ಡಿ ಜನೈರೊ (ಬ್ರೆಜಿಲ್): ದಕ್ಷಿಣ ಅಮೆರಿಕದ ಅಮೆಜಾನ್ ಮಳೆ ಕಾಡುಗಳಲ್ಲಿ ಬದುಕಿದ್ದ ಅಮೆಜಾನ್ ಕಾಡಿನ ಬುಡಕಟ್ಟು ಸಮುದಾಯವೊಂದರಕಟ್ಟಕಡೆಯ ವ್ಯಕ್ತಿ ಮರಣ ಹೊಂದಿರುವುದಾಗಿ ತಿಳಿದು ಬಂದಿದೆ.

ಈ ವ್ಯಕ್ತಿ ರೋಂಡೊನಿಯಾದ ತಾನಾರು ವ್ಯಾಪ್ತಿಯ ಕಾಡಿನಲ್ಲಿ ಕಳೆದ ಆಗಸ್ಟ್ 23 ರಂದು ಮರಣವಾಗಿದ್ದಾನೆ ಎಂದು ಬ್ರೆಜಿಲ್‌ನ ಬುಡಕಟ್ಟು ಇಲಾಖೆ (Funai) ತಿಳಿಸಿದೆ. ಮರಣ ಹೊಂದಿದ ವ್ಯಕ್ತಿ 26 ವರ್ಷಗಳಿಂದ ಏಕಾಂಗಿಯಾಗಿ ಬದುಕಿದ್ದ.

ಈ ವ್ಯಕ್ತಿಯ ಭಾಷೆ, ಹೆಸರು, ಅವನ ಬುಡಕಟ್ಟು ಸಮುದಾಯದವರ ಪೂರ್ವಜರ ಬಗ್ಗೆ ಇದುವರೆಗೆ ಯಾರಿಗೂ ತಿಳಿದು ಬಂದಿಲ್ಲ. ranchersಎನ್ನುವರು (ಪಶುಸಾಕಾಣೆದಾರರು) 1970 ರಲ್ಲಿ ಹೊರಜಗತ್ತನ್ನೇ ನೋಡದಿದ್ದ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಈ ಬುಡಕಟ್ಟು ಸಮುದಾಯವೊಂದರ ಮೇಲೆಹತ್ಯಾಕಾಂಡ ನಡೆಸಿ ಬಹುತೇಕ ಜನರನ್ನು ಕೊಂದು ಹಾಕಿದ್ದರು.

ದಾಳಿಯಿಂದ ಪಾರಾಗಿಉಳಿದುಕೊಂಡಿದ್ದ 7 ಜನರಲ್ಲಿ ಆರು ಜನರನ್ನು1995 ರಲ್ಲಿ ಅಕ್ರಮ ಗಣಿ ನಡೆಸುವವರು ಗುಂಡಿಕ್ಕಿ ಸಾಯಿಸಿದ್ದರು. ಆಗಲೂ ಉಳಿದುಕೊಂಡಿದ್ದ ಒಬ್ಬನೇ ಒಬ್ಬ ವ್ಯಕ್ತಿ ಈಗ ಸಹಜವಾಗಿ ಕಾಡಿನಲ್ಲಿ ತನ್ನ ಗುಡಿಸಲು ಎದುರು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

‘ದಿ ಮ್ಯಾನ್ ಆಫ್ ಹೋಲ್’ ಎಂದು ಹೆಸರಾಗಿದ್ದ ಈ ಬುಡಕಟ್ಟು ವ್ಯಕ್ತಿಗೆ 60 ವಯಸ್ಸಾಗಿರಬಹುದು. ಸಹಜವಾಗಿ ಮೃತಪಟ್ಟಿದ್ದಾನೆ ಎಂದು ಇಲಾಖೆ ತಿಳಿಸಿದೆ.

ಬುಡಕಟ್ಟು ಇಲಾಖೆ ಈತನ ಇರುವಿಕೆಯನ್ನು ತಿಳಿದು ಅಧ್ಯಯನ ಕೈಗೊಂಡಾಗ ಈತನಿಗೆ ಸಂಬಂಧಿಸಿದಂತೆ ಹಿಂದೆ ಏನೆಲ್ಲಾ ಆಗಿತ್ತು ಎಂದು ವಿಧಿವಿಜ್ಞಾನ ಸಹಾಯದ ಮೂಲಕ ಪತ್ತೆ ಹಚ್ಚಿದ್ದರು. ಡಾಕ್ಯುಮೆಂಟರಿ ಕೂಡ ಮಾಡಿದ್ದರು. ಹೊರಜಗತ್ತಿಗೆ ಕರೆದುಕೊಂಡು ಬರಲು ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಆತನನ್ನು ಅವನ ಪಾಡಿಗೆ ಬಿಟ್ಟಿದ್ದರು.ಈ ವ್ಯಕ್ತಿ ಪ್ರಾಣಿಗಳನ್ನು ಬಲೆಗೆ ಕೆಡವಲು ತನ್ನ ಪ್ರದೇಶದಲ್ಲಿ ವಿಶಿಷ್ಠ ರಂದ್ರಗಳನ್ನು ಮಾಡುತ್ತಿದ್ದ ಎನ್ನುವುದು ತಿಳಿದು ಬಂದಿತ್ತು. ಹೀಗಾಗಿ ಆತನಿಗೆ ‘ದಿ ಮ್ಯಾನ್ ಆಫ್ ಹೋಲ್’ ಎಂದು ಹೆಸರು ಬಂದಿತ್ತು.

ಈ ಬುಡಕಟ್ಟು ವ್ಯಕ್ತಿಯ ನಿಧನಕ್ಕೆ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವ ಸರ್ವೈವಲ್ ಇಂಟನ್ಯಾಷನಲ್ ಸಂಸ್ಥೆ ಕಂಬನಿ ಮಿಡಿದಿದೆ.

ಅಮೆಜಾನ್‌ನ ಕಾಡುಗಳಲ್ಲಿ ಅಜ್ಞಾತವಾಗಿದ್ದ ಬುಡಕಟ್ಟು ಸಮುದಾಯವೊಂದರಕಟ್ಟ ಕಡೆಯ ವ್ಯಕ್ತಿ ಸಾಯುವ ಮೂಲಕ ಸಮುದಾಯವೊಂದುನಶಿಸಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಪಹರಣವಾದ ಮಗು ಬಿಜೆಪಿ ನಾಯಕಿ ಮನೆಯಲ್ಲಿ ಪತ್ತೆ: ಮಾನವ ಕಳ್ಳಸಾಗಣೆ ಜಾಲ ಬಯಲಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.