ಇಸ್ಲಾಮಾಬಾದ್: ಇರಾನ್ ಮತ್ತು ಉತ್ತರ ಕೊರಿಯಾ ನಂತರ ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್ಎಟಿಎಫ್) ಕಪ್ಪುಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಇದರಿಂದ ಪಾರಾಗುವ ವಿಶ್ವಾಸವನ್ನು ಪಾಕ್ ವ್ಯಕ್ತಪಡಿಸಿದೆ.

‘ಹಣಕಾಸು ವ್ಯವಹಾರಗಳ ಸಚಿವ ಹಮ್ಮದ್ ಅಝರ್ ನೇತೃತ್ವದ ಪಾಕಿಸ್ತಾನದ ನಿಯೋಗವು ಪ್ಯಾರಿಸ್ನಲ್ಲಿರುವ ‘ಎಫ್ಎಟಿಎಫ್’ ಕಚೇರಿಗೆ ಭೇಟಿ ನೀಡಲಿದೆ. ಉಗ್ರರಿಗೆ ಹಣಕಾಸು ಹರಿವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಕ್ ಕೈಗೊಂಡಿರುವ ಕ್ರಮಗಳನ್ನು ಅದು ವಿವರಿಸಲಿದೆ ಎಂದು ಡಾನ್ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಪಾಕ್ನ ಕ್ರಮಗಳ ಕುರಿತು ಅಕ್ಟೋಬರ್ 13ರಿಂದ 16ರವರೆಗೆ ಎಫ್ಎಟಿಎಫ್ ಮಾಹಿತಿ ಪಡೆಯಲಿದ್ದು, ಪರಿಶೀಲನೆ ನಂತರ ಅದು ಪಾಕ್ ಅನ್ನು ಬೂದು ಪಟ್ಟಿಯಲ್ಲಿಯೇ ಮುಂದುವರಿಸಬಹುದು ಅಥವಾ ಕಪ್ಪು ಪಟ್ಟಿಗೆ ಸೇರಿಸಬಹುದು ಎಂದು ‘ಡಾನ್’ ಹೇಳಿದೆ.

ಏಷ್ಯಾ ಫೆಸಿಫಿಕ್ ಒಕ್ಕೂಟ (ಎಪಿಜಿ) ಉಗ್ರರಿಗೆ ನೆರವು ನೀಡಿದ ಆರೋಪವನ್ನು ಪಾಕ್ ಮೇಲೆ ಇದೇ ತಿಂಗಳ ಆರಂಭದಲ್ಲಿ ಹೊರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.