ಇಸ್ಲಾಮಾಬಾದ್: ಅಲ್ ಅಜೀಜಿಯಾ ಸ್ಟೀಲ್ ಮಿಲ್ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ನ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಖುಲಾಸೆಗೊಳಿಸಿ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಶರೀಫ್ ವಿರುದ್ಧ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭದಲ್ಲಿ ತಾನು ನಿರ್ದೋಷಿ ಎಂದು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವರು ವಿಫಲರಾಗಿದ್ದರು. 2018ರ ಡಿಸೆಂಬರ್ನಲ್ಲಿ ಭಾರೀ ದಂಡದೊಂದಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 2001ರಲ್ಲಿ ಸೌದಿ ಅರೇಬಿಯಾದಲ್ಲಿ ಸ್ಟೀಲ್ ಮಿಲ್ ಸ್ಥಾಪಿಸಿದ್ದ ಶರೀಫ್ ಅವರ ತಂದೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಷರೀಫ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದರು. ಈ ಮಿಲ್ನ ಆಡಳಿತಾತ್ಮಕ ಮುಖ್ಯಸ್ಥರಾಗಿ ಷರೀಫ್ ಅವರ ಮಗ ಹುಸೇನ್ ನವಾಜ್ ಇದ್ದಾರೆ.

ಅವೆನ್ಫೀಲ್ಡ್ ಪ್ರಕರಣದಲ್ಲೂ 10 ವರ್ಷ ಜೈಲು ಶಿಕ್ಷೆಯಿಂದ ನವಾಜ್ ಖುಲಾಸೆಗೊಂಡಿದ್ದಾರೆ. ಫ್ಲಾಗ್ಶಿಪ್ ಭ್ರಷ್ಟಾಚಾರ ಪ್ರಕರಣದಲ್ಲೂ ಅವರು ನಿರ್ದೋಷಿ ಎಂದು ಸಾಬೀತಾಗಿದೆ. ಆದರೆ ಈ ಕುರಿತು ಮೇಲ್ಮನವಿ ಸಲ್ಲಿಕೆಯಾಗಿದೆ.

ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರು 1999ರಲ್ಲಿ ಸರ್ಕಾರವನ್ನು ಪತನಗೊಳಿಸಿದ ನಂತರ ಕುಟುಂಬ ಸಹಿತ ಪರ್ವೇಜ್ ಅವರು ದೇಶ ಬಿಟ್ಟು ಹೋಗಿದ್ದರು. ಮೂರು ಬಾರಿ ಪ್ರಧಾನಿಯಾಗಿ ದಾಖಲೆ ನಿರ್ಮಿಸಿರುವ ನವಾಜ್ ಶರೀಫ್ ಅವರು ಸದ್ಯ ದೇಶದಿಂದ ಗಡಿಪಾರಾಗಿದ್ದು, ಸೌದಿ ಅರೇಬಿಯಾದಲ್ಲಿ ಆಶ್ರಯ ಪಡೆದಿದ್ದಾರೆ. 2024ರ ಚುನಾವಣೆ ಸಂದರ್ಭದಲ್ಲಿ ಅವರು ದೇಶಕ್ಕೆ ಮರಳುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.