ಮೆಲ್ಬರ್ನ್ (ಆಸ್ಟ್ರೇಲಿಯಾ): ಪಪುವಾ ನ್ಯೂಗಿನಿಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದವರು ಸುರಕ್ಷಿತ ನೆಲೆಗೆ ತೆರಳಲು ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ದಕ್ಷಿಣ ಪೆಸಿಫಿಕ್ ರಾಷ್ಟ್ರದ ಅಧಿಕಾರಿಗಳು ಭಗ್ನಾವಶೇಷಗಳ ತೆರವಿಗೆ ಬೃಹತ್ ಯಂತ್ರಗಳ ಮೊರೆ ಹೊಕ್ಕಿದ್ದಾರೆ. ಮತ್ತೊಂದು ಭೂಕುಸಿತದ ಅಪಾಯವೂ ಎದುರಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಹಿಂದಿನ ವಾರ ಪರ್ವತಶ್ರೇಣಿಯ ಕುಸಿತದಿಂದ ಯಂಬಾಲಿ ಗ್ರಾಮವು ಅವಶೇಷಗಳಿಂದಲೇ ತುಂಬಿತ್ತು. ಇಲ್ಲಿನ ಭೂ ಪ್ರದೇಶದ ಲಕ್ಷಣವನ್ನು ಸರ್ಕಾರ ಮತ್ತು ಸೇನೆಯ ಜಿಯೋಟೆಕ್ನಿಕಲ್ ತಜ್ಞರು ಗುರುವಾರ ಪರಿಶೀಲಿಸಿದರು ಎಂದು ಎಂಗಾ ಪ್ರಾಂತೀಯ ಆಡಳಿತಾಧಿಕಾರಿ ಸ್ಯಾಂಡಿಸ್ ಸಾಕಾ ಹೇಳಿದ್ದಾರೆ.

‘ಭೂಕುಸಿತದಿಂದ ಯಂಬಾಲಿ ಗ್ರಾಮದಲ್ಲಿ ಅಪಾರ ಸಾವು–ನೋವು ಸಂಭವಿಸಿದ್ದರೂ, 700 ಜನರು ಮಾತ್ರ ಬುಧವಾರ ಸ್ಥಳಾಂತರಕ್ಕೆ ಒಪ್ಪಿದ್ದಾರೆ. ಮತ್ತಷ್ಟು ಅಪಾಯದ ಸಾಧ್ಯತೆ ಗೋಚರಿಸಿರುವುದರಿಂದ 8 ಸಾವಿರ ಜನರನ್ನು ಇಲ್ಲಿಂದ ಸ್ಥಳಾಂತರಿಸಬೇಕಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ತಜ್ಞರು ಶುಕ್ರವಾರ ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.