ಬುಡಾಪೆಸ್ಟ್: ಹಂಗೆರಿ ಸಂಸತ್ತು ಪ್ರಧಾನಿ ವಿಕ್ಟೊರ್ ಆರ್ಬನ್ ಅವರ ಪರಮಾಪ್ತೆಯಾದ ಕ್ಯಾಟಲಿನ್ ನೊವಾಕ್ ಅವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದೆ. ತನ್ಮೂಲಕ ಕ್ಯಾಟಲಿನ್ ನೊವಾಕ್ ಅವರು ದೇಶದ ಮತ್ತು ಯುರೋಪ್ ಒಕ್ಕೂಟದ ದೇಶವೊಂದರ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹೊರಹೊಮ್ಮಿದ್ದಾರೆ.

ನಮಗೆ ಆಡಳಿತದ ಶಕ್ತಿ ಅರಿವಿದೆ. ಆದರೆ ತಟಸ್ಥವಾಗಿರುತ್ತೇವೆ ಮತ್ತು ಅಗತ್ಯಬಿದ್ದರೆ ಇತರರ ಮಾತುಗಳನ್ನು ಕೇಳುತ್ತೇವೆ. ಪುರುಷರಿಗಿಂತಲೂ ಮಹಿಳೆಯರಾದ ನಾವು ಕುಟುಂಬಗಳನ್ನು ಸಮರ್ಥಿಸಿಕೊಳ್ಳುತ್ತೇವೆ. ನಾನು ಮಹಿಳೆಯಾಗಿದ್ದಕ್ಕೆ ಧನ್ಯವಾದಗಳು. ಆದಾಗ್ಯೂ ಹಂಗೇರಿಯ ಉತ್ತಮ ಅಧ್ಯಕ್ಷೆಯಾಗುವುದು ನನ್ನ ಹೆಬ್ಬಯಕೆಯಾಗಿದೆ ಎಂದು 44 ವರ್ಷದ ಹಂಗೇರಿಯ ಯುವ ಅಧ್ಯಕ್ಷೆ ಕ್ಯಾಟಲಿನ್ ಅವರು ಹೇಳಿದ್ದಾರೆ.

"ಮಹಿಳೆಯರಾದ ನಾವು ಮಕ್ಕಳನ್ನು ಪೋಷಿಸುತ್ತೇವೆ, ಕಾಯಿಲೆಯಿದ್ದವರನ್ನು ನೋಡಿಕೊಳ್ಳುತ್ತೇವೆ, ಅಡುಗೆ ಮಾಡುವೆವು, ಅಗತ್ಯಬಿದ್ದರೆ ಮನೆ ಮತ್ತು ಹೊರಗೆ ಕೆಲಸ ಮಾಡುತ್ತೇವೆ. ನೊಬೆಲ್ ಪ್ರಶಸ್ತಿಗಳನ್ನು ಗೆಲ್ಲುತ್ತೇವೆ' ಎಂದು ಇದೀಗ ಅಧ್ಯಕ್ಷೆಯಾಗಿ ಆಯ್ಕೆಯಾದ ಕ್ಯಾಟಲಿನ್ ಅವರು ಚುನಾವಣೆಗೂ ಮುನ್ನ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.