ವ್ಯಾಟಿಕನ್ ಸಿಟಿ: ಆಫ್ರಿಕಾ ದೇಶಗಳಲ್ಲಿ ಶಾಂತಿ ಪ್ರಕ್ರಿಯೆ ಬಲಪಡಿಸುವ ಉದ್ದೇಶದಿಂದ ಪೋಪ್ ಫ್ರಾನ್ಸಿಸ್ ಅವರು ಸುಡಾನ್ನ ನಾಯಕರ ಪಾದಗಳಿಗೆ ಮಂಡಿಯೂರಿ ಚುಂಬಿಸಿದ್ದಾರೆ.

ಆಫ್ರಿಕಾ ದೇಶಗಳ ನಾಯಕರಿಗಾಗಿ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೋಪ್ ಅವರು ದಕ್ಷಿಣ ಸುಡಾನ್ನ ಅಧ್ಯಕ್ಷಸಾಲ್ವಾ ಕಿರ್ ಮಾಯಾರ್ಡಿಟ್ ಮತ್ತು ವಿರೋಧ ಪಕ್ಷದ ನಾಯಕರಲ್ಲಿ ಶಾಂತಿ ಒಪ್ಪಂದ ಮುಂದುವರಿಸುವಂತೆ ಕೋರಿ ಅವರ ಪಾದಗಳಿಗೆ ಮುತ್ತು ನೀಡಿದ್ದಾರೆ.

ಪವಿತ್ರ ಗುರುವಾರದಂದು ಪೋಪ್ ಅವರು ಸಾಮಾನ್ಯವಾಗಿ ಕೈದಿಗಳ ಪಾದ ತೊಳೆಯುತ್ತಾರೆ. ಆದರೆ ಇಂತಹ ನಡವಳಿಕೆ ಇದೇ ಮೊದಲು.

‘ದೇಶ ಕಟ್ಟುವ ಕನಸು ಕಾಣುವ ನಾಗರಿಕರ ಉನ್ನತಿಗಾಗಿ ಶಾಂತಿ ನೆಲೆಸಬೇಕಾಗಿದೆ. ಇದಕ್ಕಾಗಿ ರಾಜಕೀಯ ನಾಯಕರು ಪ್ರಯತ್ನಿಸಬೇಕು’ ಎಂದೂ ಪೋಪ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಸುಡಾನ್ನ ವಿರೋಧ ಪಕ್ಷದ ನಾಯಕ ರೆಕ್ ಮಚಾರ್ ಹಾಗೂ ಮೂವರು ಉಪಾಧ್ಯಕ್ಷರು ಪಾಲ್ಗೊಂಡಿದ್ದರು.

‘ಇಂತಹ ನಡವಳಿಕೆ ನಾನು ಈ ಹಿಂದೆ ನೋಡಿಲ್ಲ. ಇದು ನನ್ನಲ್ಲಿ ಕಣ್ಣೀರು ತರಿಸಿದೆ’ ಎಂದು ಉಪಾಧ್ಯಕ್ಷೆ ರಿಬೆಕಾ ನೈಂಡೆಂಗ್ ಗರಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.