ಲಂಡನ್:ಬ್ರಿಟನ್ನ ಸುದೀರ್ಘ ಕಾಲದ ರಾಣಿ ಎನಿಸಿದ್ದ 2ನೇ ಎಲಿಜಬೆತ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್ಗೆ ಆಗಮಿಸಿದ್ದಾರೆ.

96 ವರ್ಷ ವರ್ಷದ ರಾಣಿ ಎಲಿಜಬೆತ್ ಅವರು,ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್ನ ಬಾಲ್ಮೋರಲ್ ಕ್ಯಾಸಲ್ನ ಬೇಸಿಗೆ ನಿವಾಸದಲ್ಲಿ ನಿಧನರಾಗಿದ್ದರು. ನಾಳೆ (ಸೆಪ್ಟೆಂಬರ್ 19) ಬೆಳಿಗ್ಗೆ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ನವದೆಹಲಿಯಿಂದಮುರ್ಮು ಅವರ ವಿಮಾನ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ಶನಿವಾರ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರಾಷ್ಟ್ರಪತಿ ಭವನ,ಎರಡನೇ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾಗೂಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್ಗೆ ತೆರಳಿದ್ದಾರೆ ಎಂದು ತಿಳಿಸಿತ್ತು.

ಇದನ್ನೂ ಓದಿ:Queen Elizabeth II | ಬ್ರಿಟನ್ ರಾಣಿ ರಾಣಿ 2ನೇ ಎಲಿಜಬೆತ್ ಇನ್ನಿಲ್ಲ

ಭಾರತ ಸರ್ಕಾರಸೆಪ್ಟೆಂಬರ್ 11ರಂದು ದೇಶದಾದ್ಯಂತ ಶೋಕಾಚರಣೆ ಘೋಷಿಸಿತ್ತು. ಮರುದಿನ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ಗೆ ತೆರಳಿ ಸರ್ಕಾರದ ಪರವಾಗಿ ಸಂತಾಪ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.