ಮಾಸ್ಕೊ: ‘ಉಕ್ರೇನ್ ಸಂಘರ್ಷದ ಕುರಿತು ಭಾರತ, ಚೀನಾ, ಬ್ರೆಜಿಲ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಮೂರೂ ರಾಷ್ಟ್ರಗಳು ಸಂಘರ್ಷ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ವ್ಲಾದಿವೋಸ್ಟಾಕ್‌ನಲ್ಲಿ ನಡೆದ ಈಸ್ಟರ್ನ್ ಎಕನಾಮಿಕ್ ಫೋರಂನ (ಇಇಎಫ್) ಸರ್ವಸದಸ್ಯರ ಅಧಿವೇಶನದಲ್ಲಿ ಪುಟಿನ್ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ ‘ಟಾಸ್’ ವರದಿ ಮಾಡಿದೆ.

‘ಉಕ್ರೇನ್ ಮಾತುಕತೆಗಳನ್ನು ಮುಂದುವರಿಸಲು ಬಯಸಿದರೆ, ನಾನು ಕೂಡ ಮಾತುಕತೆಗೆ ಮುಂದಾಗಬಹುದೆಂದು ಪುಟಿನ್ ಹೇಳಿದ್ದಾರೆ’ ಎಂದು ಅಮರಿಕದ ಮಾಧ್ಯಮ ಸಂಸ್ಥೆ ‘ಪೊಲಿಟಿಕೊ’ ಕೂಡ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಎರಡು ವಾರಗಳ ನಂತರ ಪುಟಿನ್ ಅವರಿಂದ ಈ ಹೇಳಿಕೆಗಳು ಬಂದಿವೆ.

‘ನಾವು ನಮ್ಮ ಸ್ನೇಹಿತರು ಮತ್ತು ಪಾಲುದಾರರನ್ನು ಗೌರವಿಸುತ್ತೇವೆ. ಮುಖ್ಯವಾಗಿ ಚೀನಾ, ಬ್ರೆಜಿಲ್ ಮತ್ತು ಭಾರತ ಈ ಸಂಘರ್ಷದ ಸುತ್ತಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿವೆ. ಈ ವಿಷಯದ ಬಗ್ಗೆ ನಾನು ನಮ್ಮ ಪಾಲುದಾರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇನೆ’ ಎಂದು ಪುಟಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.