ಲಂಡನ್: ವೇಲ್ಸ್ನ ದಿವಂಗತ ರಾಜಕುಮಾರಿ ಡಯಾನ ಅವರ ದಾರಿಯಲ್ಲೇ ಸಾಗುತ್ತಿರುವ ಪುತ್ರ ವಿಲಿಯಂ ಅವರು, ದೇಶದಲ್ಲಿನ ನಿರಾಶ್ರಿತರಿಗೆ ಸೂರು ಕಲ್ಪಿಸುವ ಐದು ವರ್ಷದ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದರು.

ರಾಜಕುಮಾರ ವಿಲಿಯಮ್ ಅವರು ತಮ್ಮ ರಾಯಲ್ ಫೌಂಡಶೇನ್ ಮೂಲಕ ಆರಂಭಿಕ ಜಿಬಿಪಿ 3 ಮಿಲಿಯನ್ (₹31 ಕೋಟಿ) ಹೂಡಿಕೆ ಮಾಡಿದ್ದಾರೆ.

ದಕ್ಷಿಣ ಲಂಡನ್ನ ಆರು ಪ್ರಮುಖ ಪ್ರದೇಶಗಳಲ್ಲಿ ಒಂದು ಜಾಗ ಹೊಸದಾಗಿ ಮನೆ ನಿರ್ಮಿಸಲು ಯೋಗ್ಯವಾಗಿದೆ ಎಂದ ಅವರು, ನಾನು ಮೊದಲ ಬಾರಿಗೆ ನಿರಾಶ್ರಿತರ ಗುಡಿಸಿಲಿಗೆ ಭೇಟಿ ನೀಡಿದಾಗ 11 ವರ್ಷ ವಯಸ್ಸಾಗಿತ್ತು, ಅಲ್ಲಿಯ ಸ್ಥಿತಿ ನನ್ನ ಮೇಲೆ ಆಳವಾದ ಮತ್ತು ದೀರ್ಘವಾದ ಪರಿಣಾಮ ಬೀರಿತ್ತು ಎಂದರು.

ಇದೇ ವೇಳೆ ‘ಮನೆ ನಿರ್ಮಿಸಿ, ನಿರಾಶ್ರಿತರ ಸಮಸ್ಯೆಯನ್ನು ತೊಡೆದುಹಾಕಲಾಗುವುದು‘ ಎಂದು ಘೋಷಿಸಿದರು.

ಪ್ರಸ್ತುತ ದೇಶದಲ್ಲಿ ಹಾಸ್ಟೆಲ್ಗಳಲ್ಲಿ, ತಾತ್ಕಾಲಿಕ ವಸತಿ ಪ್ರದೇಶಗಳಲ್ಲಿ, ಕಾರುಗಳಲ್ಲಿ ವಾಸಿಸುವವರನ್ನು ಸೇರಿ ಒಟ್ಟು 3 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.