ಲಂಡನ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ(ಜ.8)ದಿಂದ ಮೂರು ದಿನಗಳ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಮಾತುಕತೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ.

2022ರ ಜೂನ್‌ನಲ್ಲಿ ರಾಜನಾಥ್ ಸಿಂಗ್ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಯೋಜಿಸಲಾದ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು.

ಭೇಟಿಯ ವೇಳೆ ರಾಜನಾಥ್ ಸಿಂಗ್ ಇಂಗ್ಲೆಂಡ್ ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಅವರೊಂದಿಗೆ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಬಳಿಕ ಅವರು ಲಂಡನ್‌ನಲ್ಲಿನ ಮಹಾತ್ಮ ಗಾಂಧಿ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ.

ಅಲ್ಲದೇ ಇಂಗ್ಲೆಂಡ್‌ನಲ್ಲಿನ ಭಾರತೀಯ ವಲಸಿಗರರೊಂದಿಗೆ ಸಂವಾದವೂ ಮೂರು ದಿನಗಳ ಪ್ರವಾಸದ ಭಾಗವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಭೇಟಿ ತುಂಬಾ ಮಹತ್ವದ್ದಾಗಿದೆ. 22 ವರ್ಷಗಳ ಬಳಿಕ ಇಂಗ್ಲೆಂಡ್‌ಗೆ ಭಾರತದ ರಕ್ಷಣಾ ಸಚಿವರ ಮೊದಲ ಭೇಟಿಯಾಗಿದೆ. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು 2002ರ ಜನವರಿಯಲ್ಲಿ ಲಂಡನ್‌ಗೆ ಕೊನೆಯದಾಗಿ ಭೇಟಿ ನೀಡಿದ್ದರು.

‘ಉನ್ನತ ಮಟ್ಟದ ಚರ್ಚೆಗಾಗಿ ಮುಂದಿನ ವಾರ ಸಿಂಗ್ ಅವರ ಉದ್ದೇಶಿತ ಭೇಟಿಯು, ಭಾರತದೊಂದಿಗೆ ರಾಜಕೀಯ ಸಂಬಂಧದಲ್ಲಿ ಸುಧಾರಣೆಯನ್ನು ಸೂಚಿಸುತ್ತದೆ' ಎಂದು ರಕ್ಷಣಾ ವಿಶ್ಲೇಷಕ ರಾಹುಲ್ ರಾಯ್ ಚೌಧರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭೇಟಿಯ ವೇಳೆ ರಾಜನಾಥ್ ಸಿಂಗ್ ಅವರು ಇಂಗ್ಲೆಂಡ್‌ನಲ್ಲಿನ ಶಸ್ತ್ರಾಸ್ತ್ರ ಉತ್ಪಾದನಾ ಘಟಕಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಿ20 ಶೃಂಗಸಭೆಗಾಗಿ ಪ್ರಧಾನಿ ರಿಷಿ ಸುನಕ್ ಭಾರತಕ್ಕೆ ಭೇಟಿ ನೀಡಿದ್ದರು.
.ಮೋದಿ ಜತೆ ರಚನಾತ್ಮಕ ಚರ್ಚೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.