ಬಾಗ್ದಾದ್ (ಎಎಫ್‌ಪಿ): ಬಿಗಿ ಭದ್ರತೆಯುಳ್ಳ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಗುರುವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ.

ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳ ಸೇನಾಪಡೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಇರಾಕ್ ಮತ್ತು ನೆರೆಯ ಸಿರಿಯಾದಲ್ಲಿ ಇರುವ ಜಿಹಾದಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅಂತರರಾಷ್ಟ್ರೀಯ ಮೈತ್ರಿ ಪಡೆಗಳ ನೇತೃತ್ವವನ್ನು ಅಮೆರಿಕ ವಹಿಸಿಕೊಂಡಿದೆ. ಇತ್ತೀಚಿನ ದಿನಗಲ್ಲಿ ಹಲವು ಬಾರಿ ಸೇನೆಯ ಮೇಲೆ ದಾಳಿ ನಡೆದಿದೆ.

ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಪ್ಯಾಲೆಸ್ಟೀನ್ ಇಸ್ಲಾಮಿಸ್ಟ್ ಸಮೂಹವಾದ ಹಮಾಸ್ ನಡುವಣ ಯುದ್ಧದ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ.

ಇರಾನ್ ಜೊತೆಗೆ ಗುರುತಿಸಿಕೊಂಡಿರುವ ಬಂಡುಕೋರರು ದಾಳಿ ನಡೆಸಿರುವ ಸೂಚನೆಗಳಿವೆ. ಇಸ್ರೇಲ್ ಸರ್ಕಾರವು ರಾಜತಾಂತ್ರಿಕ ವಿಭಾಗ ಮತ್ತು ಸಿಬ್ಬಂದಿಯ ರಕ್ಷಣೆಗೆ ಎಲ್ಲ ಅಧಿಕಾರ ಬಳಸಿಕೊಳ್ಳಬೇಕು ಎಂದು ಅಮೆರಿಕದ ವಕ್ತಾರರು ಇರಾಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇರಾನ್ ಪರ ಗುಂಪುಗಳು ಅಕ್ಟೋಬರ್ ನಂತರ ಅಮೆರಿಕ ಮತ್ತು ಮೈತ್ರಿ ಪಡೆಗಳನ್ನು ಗುರಿಯಾಗಿಸಿ 12ಕ್ಕೂ ಹೆಚ್ಚು ಬಾರಿ ರಾಕೆಟ್, ಡ್ರೋನ್ ದಾಳಿ ನಡೆಸಿವೆ. ಆದರೆ, ರಾಯಭಾರಿ ಕಚೇರಿ ಗುರಿಯಾಗಿಸಿ ರಾಕೆಟ್ ದಾಳಿ ನಡೆದಿರುವುದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.