ಮಾಸ್ಕೋ: ‘ಉಕ್ರೇನ್‌ನಲ್ಲಿ ನಮ್ಮ ಹಲವು ಸೈನಿಕರು ಹತರಾಗಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ’ ಎಂದು ರಷ್ಯಾದ ಮಿಲಿಟರಿ ಭಾನುವಾರ ಒಪ್ಪಿಕೊಂಡಿದೆ. ಉಕ್ರೇನ್ ಮೇಲಿನ ಆಕ್ರಮಣದ ನಂತರ ಸಾವುನೋವುಗಳ ಬಗ್ಗೆ ರಷ್ಯಾ ಮೊದಲ ಬಾರಿಗೆ ಅಧಿಕೃತವಾಗಿ ನೀಡಿರುವ ಮಾಹಿತಿ ಇದು.

ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಅವರು ಸಾವುನೋವನ್ನು ಒಪ್ಪಿಕೊಂಡರಾದರೂ ಅಂಕಿಸಂಖ್ಯೆಗಳನ್ನು ಮುಂದಿಡಲಿಲ್ಲ. ‘ನಮ್ಮ ಒಡನಾಡಿಗಳಲ್ಲಿ ಹಲವರು ಹತರಾಗಿದ್ದಾರೆ, ಕೆಲವರು ಗಾಯಗೊಂಡವರಿದ್ದಾರೆ. ಆದರೆ, ಉಕ್ರೇನ್‌ಗೆ ಹೋಲಿಸಿಕೊಂಡರೆ ನಮ್ಮ ಕಡೆ ಕಡಿಮೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ರಷ್ಯಾದ 3,500 ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ.

ಕಳೆದ ಗುರುವಾರ ಮಿಲಿಟರಿ ಕಾರ್ಯಾಚರಣೆ ಆರಂಭವಾದಾಗಿನಿಂದ ಉಕ್ರೇನ್‌ನ 27 ಕಮಾಂಡ್ ಪೋಸ್ಟ್‌ಗಳು ಮತ್ತು ಸಂವಹನ ಕೇಂದ್ರಗಳು, 38 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, 56 ರಾಡಾರ್ ಕೇಂದ್ರಗಳು ಸೇರಿದಂತೆ 1,067 ಸೇನಾ ನೆಲಗಳನ್ನು ರಷ್ಯಾ ಧ್ವಂಸಗೊಳಿಸಿದೆ ಎಂದು ಕೊನಾಶೆಂಕೋವ್ ತಿಳಿಸಿದ್ದಾರೆ.

ಕೊನಾಶೆಂಕೋವ್ ಅವರು ಹೇಳಿದ ಅಂಕಿ ಸಂಖ್ಯೆಗಳು, ಉಕ್ರೇನ್ ಸೇನೆ ನೀಡಿರುವ ಅಂಕಿಸಂಖ್ಯೆಗಳು ಪರಿಶೀಲಿನೆಗೆ ಒಳಪಟ್ಟಿಲ್ಲ ಎಂದು ಸುದ್ದಿಸಂಸ್ಥೆ ‘ಪಿಟಿಐ’ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.