ಮಾಸ್ಕೊ: ದೇಶದ ಅಸ್ತಿತ್ವ, ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಧಕ್ಕೆ ಉಂಟಾದರೆ ಅಣ್ವಸ್ತ್ರ ಬಳಸಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದಾರೆ.

ರಷ್ಯಾದ ಸರ್ಕಾರಿ ಟಿ.ವಿ ವಾಹಿನಿ ಬುಧವಾರ ಪ್ರಸಾರ ಮಾಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪುಟಿನ್, ಅಣ್ವಸ್ತ್ರ ಯುದ್ಧವನ್ನು ಪ್ರಚೋದಿಸುವಂತಹ ಯಾವುದೇ ಬೆಳವಣಿಗೆಯನ್ನು ಅಮೆರಿಕ ತಪ್ಪಿಸುವ ವಿಶ್ವಾಸವಿದೆ. ಆದರೆ, ರಷ್ಯಾದ ಅಣ್ವಸ್ತ್ರ ಪಡೆಗಳು ಅಂತಹ ಸನ್ನಿವೇಶ ಎದುರಾದರೆ ಅಣ್ವಸ್ತ್ರ ಪ್ರಯೋಗಿಸಲು ಸಜ್ಜಾಗಿವೆ. ರಷ್ಯಾದ ಬಳಿ ಅತ್ಯಾಧುನಿಕ ಪರಮಾಣು ಶಸ್ತ್ರಾಸ್ತ್ರಗಳು ಇವೆ. ನಮ್ಮ ಬಳಿ ಇರುವ ಅಣ್ವಸ್ತ್ರಗಳು ಅಮೆರಿಕ ಹೊಂದಿರುವ ಅಣ್ವಸ್ತ್ರಗಳಿಗಿಂತಲೂ ಹೆಚ್ಚು ಅತ್ಯಾಧುನಿಕವಾಗಿವೆ ಎಂದು ಹೇಳಿದ್ದಾರೆ.

ಉಕ್ರೇನ್ ಯುದ್ಧ ಭೂಮಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಯೋಚಿಸಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, ‘ಅದರ ಅಗತ್ಯವಿಲ್ಲ. ಉಕ್ರೇನ್‌ನಲ್ಲಿ ರಷ್ಯಾ ತನ್ನ ಗುರಿಗಳನ್ನು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುದ್ಧ ಕೊನೆಗಾಣಿಸಬೇಕಾದರೆ ಯಾವುದೇ ಒಪ್ಪಂದಕ್ಕೆ ಬರಲು ಪಶ್ಚಿಮದಿಂದ ದೃಢವಾದ ಖಾತ್ರಿಗಳು ಬೇಕಾಗುತ್ತವೆ ಎಂದು ಒತ್ತಿ ಹೇಳಿದ ಅವರು, ಶಾಂತಿ ಮಾತುಕತೆಗೆ ಬಾಗಿಲು ಕೂಡ ತೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.