ಕೀವ್: ರಷ್ಯಾದ ಗಡಿ ಭಾಗದಲ್ಲಿರುವ ಉಕ್ರೇನ್ನ ಹಾರ್ಕಿವ್ ಪ್ರಾಂತ್ಯದ ಆಡಳಿತ ಕೇಂದ್ರದ ಮೇಲೆ ಮಂಗಳವಾರ ರಾತ್ರಿ ರಷ್ಯಾ ಹಲವು ಸುತ್ತಿನ ದಾಳಿ ನಡೆಸಿದೆ.

ದಾಳಿಯಿಂದಾಗಿ ಕನಿಷ್ಠ ಒಂದು ಕಟ್ಟಡಕ್ಕೆ ಹಾನಿಯಾಗಿದೆ. ಅಲ್ಲದೆ ಒಬ್ಬರು ಮೃತಪಟ್ಟಿದ್ದಾರೆ ಎಂದು ಮೇಯರ್ ಇಹೊರ್ ತೆರೆಖೋವ್ ತಿಳಿಸಿದ್ದರು. ಆದರೆ, ಬಳಿಕ ದಾಳಿಯಲ್ಲಿ ವ್ಯಕ್ತಿ ಮೃತಪಟ್ಟಿರುವ ಕುರಿತು ಖಚಿತವಾಗಿಲ್ಲ ಎಂದು ಟೆಲಿಗ್ರಾಂ ಆ್ಯಪ್ನಲ್ಲಿ ಹೇಳಿದ್ದಾರೆ.

ಈ ವರದಿಗಳನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ತಿಳಿಸಿದೆ. ಈ ಕುರಿತು ರಷ್ಯಾ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದನ್ನು ರಷ್ಯಾ ಮತ್ತು ಉಕ್ರೇನ್ ಎರಡೂ ಅಲ್ಲಗಳೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.