ಬೆಂಗಳೂರು: ಅಮೆರಿಕದ ಸೀಕ್ರೆಟ್ ಸರ್ವಿಸ್ನ ಏಜೆಂಟ್ ಒಬ್ಬ ಲೈಂಗಿಕತೃಷೆ ತೀರಿಸಿಕೊಳ್ಳಲು ತನ್ನ ಗೆಳತಿಯನ್ನು ಯುಎಸ್ ಮಾಜಿ ಅಧ್ಯಕ್ಷರ ಮನೆಗೇ ಕರೆಸಿದ್ದ ಅಪರೂಪದ ಪ್ರಸಂಗ ವರದಿಯಾಗಿದೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹವಾಯಿ ದ್ವೀಪದ ಖಾಸಗಿ ಎಸ್ಟೇಟ್ನಲ್ಲಿ 2022 ನವೆಂಬರ್ 6 ರಂದು ಈ ಘಟನೆ ನಡೆದಿದೆ ಎಂದು ಎಬಿಸಿ ಚಾನಲ್ ವರದಿ ಮಾಡಿದೆ.

ಕೊರಿಯೇ ಡ್ವಾನ್ಯೆನ್ ಎನ್ನುವ ಯುವತಿ ಡಾಲೆ ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಕೊರಿಯೇ ತಮಗಾದ ಅನುಭವನ್ನು ತೆರೆದಿಟ್ಟಿದ್ದಾರೆ.

ಪುಸ್ತಕದ ಸಂಗತಿ ಹಲವರ ಗಮನ ಸೆಳೆದ ಮೇಲೆ, ಎಬಿಸಿ ಚಾನಲ್ ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಪ್ರತಿಕ್ರಿಯೆ ಕೇಳಿತ್ತು. ಇದನ್ನು ಖಚಿತಪಡಿಸಿರುವ ಮುಖ್ಯಸ್ಥರು, ,ಹೌದು ಆ ಘಟನೆ ನಡೆದಿತ್ತು. ಅದಕ್ಕಾಗಿ ಆರೋಪಿತ ಏಜೆಂಟ್ನನ್ನು ತಕ್ಷಣವೇ ಅಮಾನತು ಮಾಡಲಾಗಿತ್ತು. ಆಂತರಿಕ ವರದಿ ಬಂದ ನಂತರ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು‘ ಎಂದು ಹೇಳಿದ್ದಾರೆ. ಆತನ ಗುರುತನ್ನು ಬಹಿರಂಗಪಡಿಸಿಲ್ಲ.

ಅಂದು ಯಾರಿಗೂ ತಿಳಿಯುವುದಿಲ್ಲ ಬಾ ಎಂದು ಮಾಜಿ ಅಧ್ಯಕ್ಷರ (ಒಬಾಮ) ಹವಾಯಿ ಬೀಚ್ ಪಕ್ಕದಲ್ಲಿರುವ ಅತ್ಯಂತ ಐಷಾರಾಮಿ ಬಂಗ್ಲೆಗೆ ಲೈಂಗಿಕತೃಷೆ ತೀರಿಸಿಕೊಳ್ಳಲು ನನ್ನನ್ನು ಆಹ್ವಾನಿಸಿದ್ದ. ವಿಲಾಸಿ ಬಾತ್ರೂಂನಲ್ಲಿ ಸೆಕ್ಸ್ ಮಾಡಿದ್ದೆವು. ಆ ಸಮಯದಲ್ಲಿ ಒಬಾಮಾ–ಮಿಚೆಲ್ ಇರಲಿಲ್ಲ ಎಂದು ಕೊರಿಯೇ ಬಹಿರಂಗಪಡಿಸಿದ್ದಾರೆ.

ಈ ಇಬ್ಬರೂ ಇನ್ನೂ ಜೊತೆಯಾಗಿಯೇ ವಾಸಿಸುತ್ತಿದ್ದಾರೆ ಎಂದು ಸೀಕ್ರೆಟ್ ಸರ್ವಿಸ್ ಏಜೆಂಟ್ ಮುಖ್ಯಸ್ಥರು ಹೇಳಿದ್ದಾರೆ.

ಆರೋಪಿತ ಏಜೆಂಟ್ ಒಬಾಮ ಅವರ ಇಬ್ಬರು ಹೆಣ್ಣು ಮಕ್ಕಳಾದ ಸಾಶಾ (23) ಮತ್ತು ಮಿಲಿಯಾ (26) ಅವರ ಭದ್ರತೆಯ ಹೊಣೆ ಹೊತ್ತಿದ್ದ ತಂಡದ ಸದಸ್ಯ ಎನ್ನಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಎಂಬುದು ಅಧ್ಯಕ್ಷರಿಗೆ, ಮಾಜಿ ಅಧ್ಯಕ್ಷರಿಗೆ, ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡುತ್ತದೆ.
.ಐದೂ ವರ್ಷದ ಸಂಬಳವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟ ಬಿಹಾರ ಯುವ ಸಂಸದೆ!.ವಾರಕ್ಕೆ 70 ಗಂಟೆ ಕೆಲಸ: ನಾನು ಸತ್ತರೂ ಅದನ್ನೇ ಹೇಳೋದು.. ಇನ್ಫಿ ನಾರಾಯಣ ಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.