ಬೀಜಿಂಗ್: ವಿದೇಶದಿಂದ ಬಂದವರಲ್ಲದೇ, ಬೀಜಿಂಗ್ನಲ್ಲಿ ಆಂತರಿಕವಾಗಿ ಪ್ರಸರಣೆಗೊಂಡಿರುವಆರು ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಅಲ್ಲಿನ ಹಲವಾರು ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ.

ಬೀಜಿಂಗ್ನಲ್ಲಿ ಆಂತರಿಕವಾಗಿ ಪತ್ತೆಯಾದ 6 ಪ್ರಕರಣಗಳು ಸೇರಿದಂತೆ ದೇಶದಲ್ಲಿ ಶುಕ್ರವಾರ 18 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ಶನಿವಾರ ತಿಳಿಸಿದೆ.

ಶುಕ್ರವಾರ, ಲಕ್ಷಣರಹಿತ 7 ಹೊಸ ಪ್ರಕರಣಗಳು ವರದಿಯಾಗಿವೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಂಥ 98 ಮಂದಿಯನ್ನು ಈ ವರೆಗೆ ಪ್ರತ್ಯೇಕ ಮಾಡಲಾಗಿದೆ ಎಂದೂ ಅದು ಹೇಳಿದೆ.

ಆಮದು ಮಾಡಿಕೊಳ್ಳಲಾಗುವ ಸಾಲ್ಮನ್ ಮೀನುಗಳನ್ನು ಕತ್ತರಿಸುವ ಕ್ಸಿನ್ಫಾಡಿ ಮಾರುಕಟ್ಟೆಯಲ್ಲಿ ಶುಕ್ರವಾರ 7 ಪ್ರಕರಣಗಳು ಪತ್ತೆಯಾದವು. ಗಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಅಲ್ಲಿನ 9 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಗಳು ನೆಗೆಟಿವ್ ಬಂದಿದೆ. ಆದರೂ ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೇ ಕೆಲ ಮಾಂಸ ಮಾರುಕಟ್ಟೆಗಳನ್ನೂ ಲಾಕ್ಡೌನ್ ಮಾಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.