ನ್ಯೂಯಾರ್ಕ್: ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದ ದಾನಿಶ್ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯ ಛಾಯಾಗ್ರಾಹಕರು 2022ನೇ ಸಾಲಿನ ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಫೀಚರ್ ಫೋಟೊಗ್ರಫಿ’ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ದೊರೆತಿದೆ.

ಅದ್ನಾನ್ ಅಬಿದಿ, ಸನಾ ಇರ್ಷಾದ್ ಮಟ್ಟೂ ಹಾಗೂ ಅಮಿತ್ ದವೆ ಅವರು ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾದ ಇತರ ಭಾರತೀಯ ಛಾಯಾಗ್ರಾಹಕರು.

ಛಾಯಾಗ್ರಾಹಕ ದಾನಿಶ್ ಸಿದ್ದಿಕಿ: ಮಿಂಚಿ ಮರೆಯಾದ ತಾರೆ

‘ಭಾರತದಲ್ಲಿ ಕೋವಿಡ್ಗೆ ಸಂಬಂಧಿಸಿ ಇವರು ತೆಗೆದ ಚಿತ್ರಗಳು ಅನ್ಯೋನ್ಯತೆ ಮತ್ತು ವಿನಾಶವನ್ನು ಸಮತೋಲನದಿಂದ ಬಿಂಬಿಸಿವೆ. ಜತೆಗೆ ನೋಡುಗರಿಗೆ ಉನ್ನತ ಅರ್ಥವನ್ನು ನೀಡಿವೆ. ಇದಕ್ಕಾಗಿ ಪ್ರಶಸ್ತಿ ನೀಡಲಾಗಿದೆ’ ಎಂದು ‘ಪುಲಿಟ್ಜರ್’ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.

ಇವರೆಲ್ಲರ ಕೆಲಸವನ್ನು ಬ್ರೇಕಿಂಗ್ ನ್ಯೂಸ್ ಫೋಟೊಗ್ರಫಿ ವಿಭಾಗದಿಂದ ‘ಫೀಚರ್ ಫೋಟೊಗ್ರಫಿ’ಗೆ ತೀರ್ಪುಗಾರರು ವರ್ಗಾಯಿಸಿದ್ದರು.

ಆಫ್ಗನ್ ಕಾಳಗ: ಭಾರತೀಯ ಫೋಟೊ ಜರ್ನಲಿಸ್ಟ್ ಸಾವು

ಅಫ್ಗಾನಿಸ್ತಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಸಿದ್ದಕಿ 2021ರ ಜುಲೈಯಲ್ಲಿ ಹತ್ಯೆಯಾಗಿದ್ದರು. ಇವರಿಗೆ ‘ಫೀಚರ್ ಫೋಟೊಗ್ರಫಿ’ ವಿಭಾಗದಲ್ಲಿ 2018ರಲ್ಲಿಯೂ ‘ಪುಲಿಟ್ಜರ್’ ದೊರೆತಿತ್ತು.

ಜಾಮೀಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಷ್ ಸಮಾಧಿ

‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್ ಡ್ಯಾನಿಷ್ರನ್ನು ಕೊಂಡಾಡಿದ ತಂದೆ

ತಾಲಿಬಾನಿಗಳ ವಶದಲ್ಲಿದ್ದಾಗ ವಿರೂಪಗೊಂಡಿದ್ದ ಫೋಟೊ ಜರ್ನಲಿಸ್ಟ್ ಸಿದ್ಧಿಕಿ ಶರೀರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.