ಮೊಗದಿಶು: ಸೊಮಾಲಿಯಾದ ರೆಸ್ಟೋರೆಂಟ್ ಹಾಗೂ ಕಾಫಿ ಶಾಪ್‌ನ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 16 ಮಂದಿ ಬಲಿಯಾಗಿದ್ದಾರೆ. 20ಕ್ಕೂ ಮಂದಿ ಗಾಯಗೊಂಡಿದ್ದಾರೆ.

ಇಸ್ಲಾಮಿಕ್ ಸಂಘಟನೆ ಅಲ್–ಶಾಬಾದ್ ಇದರ ಹೊಣೆ ಹೊತ್ತುಕೊಂಡಿದೆ.

ಗಾಯಾಳುಗಳ ಪೈಕಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಮೊದಲ ದಾಳಿಯಲ್ಲಿ 7 ಮಂದಿ ಹಾಗೂ ಎರಡನೇ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಬಾಯ್ಡೋದ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಮೊಹಮದ್ ಖಚಿತ ಪಡಿಸಿದ್ದಾರೆ.

ಸೊಮಾಲಿಯಾದ ನೈಋತ್ಯ ಭಾಗದಲ್ಲಿರುವ ಬೋಯ್ಡಾ ನಗರದಲ್ಲಿ ಆತ್ಮಾಹುತಿ ದಾಳಿಕೋರರು ಓಡಾಡುತ್ತಿರುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ದಾಳಿಯು ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡುನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.