ಕೊಲಂಬೊ: ಅವಧಿಗೆ ಮೊದಲೇ ಸಂಸತ್ ಚುನಾವಣೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿರುವ ಶ್ರೀಲಂಕಾ ಅಧ್ಯಕ್ಷ ರಾನಿಲ್‌ವಿಕ್ರಮಸಿಂಘೆ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ ಮಿಲಿಟರಿ ಮೂಲಕ ಹತ್ತಿಕ್ಕಲಾಗುವುದು ಎಂದು ಎಚ್ಚರಿಸಿದ್ದಾರೆ.

ದೇಶದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸದೆ, ಅವಧಿಗೆ ಮೊದಲೇ ಸಂಸತ್ ಅನ್ನು ವಿಸರ್ಜಿಸುವ ಪ್ರಶ್ನೆಯೇ ಇಲ್ಲ ಎಂದು ಬುಧವಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದರು. ವಿಕ್ರಮಸಿಂಘೆ ಅವರ ಅವಧಿ 2024ರ ನವೆಂಬರ್‌ವರೆಗೂ ಇದೆ. ಆದರೂ ಪ್ರತಿಪಕ್ಷಗಳು ಅವಧಿಗೂ ಮೊದಲೇ ಸಂಸತ್ ಚುನಾವಣೆ ನಡೆಸಬೇಕು. ಅಧಿಕಾರದಲ್ಲಿ ಮುಂದುವರಿಯವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಒತ್ತಾಯಿಸಿವೆ.

‘ಒಂದು ವೇಳೆ ಪ್ರತಿಭಟನಕಾರರು ನನ್ನನ್ನು ಸರ್ವಾಧಿಕಾರಿ ಎಂದರೂ ಪರವಾಗಿಲ್ಲ. ಆದರೆ, ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿ ಪಡೆಯಲೇಬೇಕು. ಸರ್ಕಾರವನ್ನು ಪದಚ್ಯುತಿಗೊಳಿಸಲು ಮತ್ತೊಮ್ಮೆ ಸಾಮೂಹಿಕವಾಗಿ ಪ್ರತಿಭಟನೆ ನಡೆಸಲು ಪ್ರಯತ್ನಗಳು ನಡೆದಿವೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಮಿಲಿಟರಿ ಬಳಸುವುದರ ಜೊತೆಗೆ ಅಗತ್ಯಬಿದ್ದರೆ ತುರ್ತು ಕಾನೂನುಗಳನ್ನು ಜಾರಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಗೋಟಬಯ ರಾಜಪಕ್ಸೆ ಅವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಾಗದೆ ಕೊಲಂಬೊದಿಂದ ಪಲಾಯನ ಮಾಡಿದ ನಂತರ ಈ ವರ್ಷದ ಜುಲೈನಲ್ಲಿ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.