ಕೊಲಂಬೊ: ಶ್ರೀಲಂಕಾ ಸೇನೆಯ ವೈದ್ಯರ ತಂಡವೊಂದು ವಿಶ್ವದ ಅತಿ ದೊಡ್ಡ ಮೂತ್ರಪಿಂಡದ ಕಲ್ಲು ತೆಗೆದು ಹಾಕುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ.

2004ರಲ್ಲಿ ಭಾರತದ ವೈದ್ಯರು ದಾಖಲಿಸಿದ ದಾಖಲೆಯನ್ನು ಈ ವೈದ್ಯರು ಮುರಿದಿದ್ದಾರೆ.

ಕೊಲಂಬೊ ಸೇನಾ ಆಸ್ಪತ್ರೆಯಲ್ಲಿ ಜೂನ್ ಆರಂಭದಲ್ಲಿ ಹೊರತೆಗೆಯಲಾದ ಕಲ್ಲು 13.372 ಸೆಂಟಿ ಮೀಟರ್ ಉದ್ದ ಮತ್ತು 801 ಗ್ರಾಂ ತೂಕವಿದೆ ಎಂದು ಸೇನೆ ಹೇಳಿಕೆ ತಿಳಿಸಿದೆ.

ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ಅತಿದೊಡ್ಡ ಮೂತ್ರಪಿಂಡದ ಕಲ್ಲು, ಸುಮಾರು 13 ಸೆಂಟಿ ಮೀಟರ್ 2004 ರಲ್ಲಿ ಭಾರತದಲ್ಲಿ ಕಂಡು ಬಂದಿದ್ದರೆ, 620 ಗ್ರಾಂ ತೂಕದ ಅತ್ಯಂತ ಭಾರವಾದ ಮೂತ್ರಪಿಂಡದ ಕಲ್ಲು 2008 ರಲ್ಲಿ ಪಾಕಿಸ್ತಾನದಲ್ಲಿ ವರದಿಯಾಗಿತ್ತು.

ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆಯು ದಾಖಲೆಯನ್ನು ದೃಢೀಕರಿಸಿದೆ.

ಆಸ್ಪತ್ರೆಯ ಜೆನಿಟೊ ಮೂತ್ರ ಘಟಕದ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಡಾ. ಕೆ. ಸುತರ್ಶನ್ ಅವರು ಕ್ಯಾಪ್ಟನ್ ಡಾ. ಡಬ್ಲ್ಯೂಪಿಎಸ್ ಸಿ ಪತಿರತ್ನ ಮತ್ತು ಡಾ ತಮಶಾ ಪ್ರೇಮತಿಲಕ ಅವರೊಂದಿಗೆ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು ಎಂದು ಸೇನೆ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.