ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯು ಸೆಪ್ಟಂಬರ್ 21ರಂದು ನಡೆಯಲಿದೆ ಎಂದು ಚುನಾವಣಾ ಆಯೋಗವು ಘೋಷಿಸಿದೆ.

2022ರಲ್ಲಿ ಆರ್ಥಿಕವಾಗಿ ದಿವಾಳಿಯಾದ ನಂತರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಚುನಾವಣೆ ಇದಾಗಿದೆ.

ಆ. 15ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಶುಕ್ರವಾರ ಹೊರಡಿಸಿರುವ ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ.

ಚುನಾವಣೆ ಘೋಷಣೆಯಿಂದ, ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಅಧಿಕಾರದ ಅವಧಿಯು ವಿಸ್ತರಣೆಗೊಳ್ಳಲಿದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ.

ಗೊಟಬಯ ರಾಜಪಕ್ಸ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶ ದಿವಾಳಿಯಾದಾಗ, ಅಧಿಕಾರದ ಚುಕ್ಕಾಣಿ ಹಿಡಿದ ವಿಕ್ರಮಸಿಂಘೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಆದರೆ ರಾನಿಲ್ ತಮ್ಮ ಉಮೇದುವಾರಿಕೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
.ಅಧ್ಯಕ್ಷೀಯ ಚುನಾವಣೆ ಮುಂದೂಡಿಕೆ ಇಲ್ಲ: ಶ್ರೀಲಂಕಾ ಪ್ರಧಾನಿ.ಸೆ.17-ಅ.16ರ ನಡುವೆ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಆಯೋಗ .
ಶ್ರೀಲಂಕಾ ಸೇನೆಯ ಮಾಜಿ ಮುಖ್ಯಸ್ಥ, ಎಲ್ಟಿಟಿಇ ಉಗ್ರ ಸಂಘಟನೆಯ ನಿರ್ನಾಮಕ್ಕೆ ಶ್ರಮಿಸಿದ್ದ ಶರತ್ ಫೋನ್ಸೆಕಾ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಪ್ರಮುಖ ವಿರೋಧ ಪಕ್ಷವಾದ ಸಮಗಿ ಜನಾ ಬಾಲವೇಗಯ್ಯ (ಎಸ್ಜೆಬಿ) ನಾಯಕ ಸಜಿತ್ ಪ್ರೇಮದಾಸ, ಮಾರ್ಕ್ಸ್ವಾದಿ ಜೆವಿಪಿ ನಾಯಕ ಅನುರಾ ಕುಮಾರ ದಿಸಾನಾಯಕೆ ಹಾಗೂ ಹಾಲಿ ಸರ್ಕಾರದ ಕಾನೂನು ಸಚಿವ ವಿಜೆಯದಾಸ ರಾಜಪಕ್ಸೆ ಸಹ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.