ವಾಷಿಂಗ್ಟನ್: ಭಾರತದಲ್ಲಿ ವಿಶೇಷವಾಗಿ ಧಾರ್ಮಿಕ ಮತ್ತು ಇತರೆ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳು ಕುಂಠಿತವಾಗುತ್ತಿರುವುದು ಆತಂಕದ ಸಂಗತಿ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗಕ್ಕೆ(ಯುಎಸ್‌ಸಿಆರ್‌ಎಫ್) ವಿಶ್ವಸಂಸ್ಥೆಯ ವಿಶೇಷ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅಲ್ಪಸಂಖ್ಯಾತರ ವಿಚಾರ ಕುರಿತು ವರದಿ ಮಾಡಲು ವಿಶ್ವಸಂಸ್ಥೆ ನೇಮಿಸಿಕೊಂಡಿರುವ ವಿಶೇಷ ಅಧಿಕಾರಿ ಫರ್ನಾಂಡ್ ಡಿ ವರೆನ್ನೆಸ್, ಭಾರತದ ಪರಿಸ್ಥಿತಿಯನ್ನು ಸದೃಢ, ವ್ಯವಸ್ಥಿತ ಮತ್ತು ಅಪಾಯಕಾರಿ ಎಂಬ ಮೂರು ಪದಗಳಲ್ಲಿ ವಿವರಿಸಬಹುದು ಎಂದಿದ್ದಾರೆ.

ಮುಖ್ಯವಾಗಿ ಧಾರ್ಮಿಕ ಮತ್ತು ಇತರೆ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಇನ್ನಿತರರನ್ನು ಗುರಿಯಾಗಿಸಿ ನಡೆಯುತ್ತಿರುವ ನಿಂದನೆಗಳಿಂದಾಗಿ ಭಾರತದಲ್ಲಿ ಅಸ್ಥಿರತೆ, ದೌರ್ಜನ್ಯ, ಹಿಂಸಾಚಾರ ಹೆಚ್ಚಾಗುತ್ತಿದೆ ಎಂದಿದ್ದಾರೆ.

ಭಾರತದಲ್ಲಿ ಆದಿವಾಸಿಗಳು, ದಲಿತರು, ಸಿಖ್ಖರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಹೆಚ್ಚಿವೆ ಎಂದು ಯುಎಸ್‌ಸಿಆರ್‌ಎಫ್ ಮುಖ್ಯಸ್ಥ ಅಬ್ರಾಹಂ ಕೂಪರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.