ಅಂಕಾರಾ : ಮೂರು ತಿಂಗಳ ಬೇಸಿಗೆಯ ವಿರಾಮದ ನಂತರ ಸಂಸತ್ತು ಪುನರಾರಂಭದ ಕೆಲವೇ ತಾಸಿಗೂ ಮುನ್ನ ಟರ್ಕಿಯ ರಾಜಧಾನಿ ಅಂಕಾರಾದ ಹೃದಯಭಾಗದಲ್ಲಿ ಭಾನುವಾರ ಆತ್ಮಾಹುತಿ ಬಾಂಬ್ ದಾಳಿಕೋರ ಸ್ಫೋಟಕ ಸಾಧನ ಸ್ಫೋಟಿಸಿದ್ದಾನೆ. ಈ ವೇಳೆ ಪೊಲೀಸರ ಗುಂಡೇಟಿಗೆ ಮತ್ತೊಬ್ಬ ದಾಳಿಕೋರ ಹತನಾಗಿದ್ದಾನೆ ಎಂದು ಆಂತರಿಕ ಭದ್ರತಾ ಸಚಿವರು ತಿಳಿಸಿದ್ದಾರೆ.

ಆಂತರಿಕ ಭದ್ರತಾ ಸಚಿವಾಲಯದ ಪ್ರವೇಶದ್ವಾರದ ಬಳಿ ನಡೆದ ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಚಿವ ಅಲಿ ಯೆರ್ಲಿಕಾಯಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

‘ದಾಳಿಕೋರರು ಸಣ್ಣ ವಾಣಿಜ್ಯ ವಾಹನದಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದರು. ವಾಹನದ ಬಳಿ ರಾಕೆಟ್ ಲಾಂಚರ್ ಬಿದ್ದಿರುವುದು ಕಾಣಿಸಿದೆ’ ಎಂದು ಯರ್ಲಿಕಾಯಾ ಹೇಳಿದರು.

ದಾಳಿಕೋರರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ. ಕುರ್ದಿಶ್ ಮತ್ತು ಎಡಪಂಥೀಯ ಉಗ್ರರು ಹಾಗೂ ಐಎಸ್ ಉಗ್ರರ ಗುಂಪು ಈ ಹಿಂದೆ ದೇಶದಾದ್ಯಂತ ಮಾರಕ ದಾಳಿಗಳನ್ನು ನಡೆಸಿರುವ ನಿದರ್ಶನಗಳಿವೆ.

ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿ ಮತ್ತು ಇತರ ಸರ್ಕಾರಿ ಕಟ್ಟಡಗಳ ಬಳಿ ಇರುವ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ವಾಹನದ ಬಳಿ ಬಾಂಬ್ ಪತ್ತೆದಳ ಶೋಧ ನಡೆಸುತ್ತಿರುವ ದೃಶ್ಯಾವಳಿಗಳು ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗಿವೆ.

‘ಭಯೋತ್ಪಾದನಾ ದಾಳಿ’ ಕುರಿತು ತನಿಖೆ ಪ್ರಾರಂಭಿಸಲಾಗಿದೆ. ಈ ದಾಳಿಗಳಿಂದ ಭಯೋತ್ಪಾದನೆಯ ವಿರುದ್ಧದ ಟರ್ಕಿಯ ಹೋರಾಟಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗುವುದಿಲ್ಲ’ ಎಂದು ಕಾನೂನು ಸಚಿವ ಯಿಲ್ಮಾಜ್ ತುಂಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.