ಕೋಪನ್ ಹೆಗನ್: ಸ್ವೀಡನ್ನ ಸಂಸತ್ ಚುನಾವಣೆಯಲ್ಲಿ ರಾಷ್ಟ್ರೀಯವಾದಿ ಹಾಗೂ ವಲಸೆ ವಿರೋಧಿ ಪಕ್ಷಗಳನ್ನೊಳಗೊಂಡ ಬಲಪಂಥೀಯ ಬಣವು ಬಹುಮತ ಗಳಿಸಿದ ಬೆನ್ನಲ್ಲೇ, ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆಂಡರ್ಸನ್ ಅವರು ಸ್ವೀಡನ್ ಸದನದ ಸ್ಪೀಕರ್ ಆಂಡ್ರಿಯಾಸ್ ನಾರ್ಲೆನ್ ಅವರನ್ನು ಭೇಟಿಯಾಗಿ, ತಮ್ಮ ರಾಜೀನಾಮೆ ಪತ್ರ ನೀಡಿದರು. ಹೊಸ ಸರ್ಕಾರ ರಚನೆಯಾಗುವವರೆಗೆ ಆಂಡರ್ಸನ್ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಲಪಂಥೀಯ ಪಕ್ಷಗಳನ್ನೊಳಗೊಂಡ ಬಣವು 176 ಸ್ಥಾನಗಳನ್ನು ಪಡೆದರೆ, ಸೋಶಿಯಲ್ ಡೆಮಾಕ್ರಟಿಕ್ ಸೇರಿದಂತೆ ಎಡಪಂಥೀಯ ಪಕ್ಷಗಳಿರುವ ಒಕ್ಕೂಟವು 173 ಸ್ಥಾನಗಳನ್ನು ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.