ಪೋಲೆಂಡ್: ರ‍್ಯಾಪ್ ಕಲಾವಿದ ಪೊಪೆಕ್‌ನಿಂದ ಪ್ರೇರಣೆಗೊಂಡ ರೂಪದರ್ಶಿ ಅಲೆಕ್‌ಸಂಡ್ರಾ ಸಡೊವಸ್ಕಾ ಅವರು ಕಣ್ಣಿನ ಗುಡ್ಡೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಪಾಯಕ್ಕೆ ಸಿಲುಕಿದ್ದಾರೆ.

ಅಲೆಕ್ ಸಂಡ್ರಾ (25) ಮಾಡಿಕೊಂಡಿರುವ ಎಡವಟ್ಟಿನಿಂದಾಗಿ ಒಂದು ಕಣ್ಣು ಸಂಪೂರ್ಣ ದೃಷ್ಟಿ ಹೀನವಾಗಿದ್ದು, ಇನ್ನೊಂದು ಕಣ್ಣು ತೀಕ್ಷ್ಣತೆ ಕಳೆದುಕೊಂಡಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

‘ಕಣ್ಣಿನ ಟ್ಯಾಟೂ ಹಾಕಿಸಿಕೊಳ್ಳುವ ಪ್ರಕ್ರಿಯೆ ಮುಗಿದ ನಂತರ, ತುಂಬಾ ನೋವಾಗುತ್ತಿದೆ ಎಂದು ಟ್ಯಾಟೂ ಕಲಾವಿದನಿಗೆ ತಿಳಿಸಿದೆ. ಆದರೆ, ಅವರು ‘ನೋವು ಸಹಜ. ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ಎಲ್ಲಾ ಸರಿಹೋಗುತ್ತದೆ’ ಎಂದರು’ ಎಂದು ರೂಪದರ್ಶಿ ತಿಳಿಸಿದ್ದಾರೆ.

ಕಲಾವಿದನ ನಿರ್ಲಕ್ಷ್ಯವೇ ಯುವತಿಯ ಈ ಸ್ಥಿತಿಗೆ ಕಾರಣ ಎಂಬುದು ಸಾಬೀತಾಗಿದ್ದು, ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.