ಮನಿಲಾ: ಫಿಲಿಪೀನ್ಸ್ನಲ್ಲಿ 15 ರಿಂದ 19 ವರ್ಷದ ವಯಸ್ಸಿನ ಹುಡುಗಿಯರಲ್ಲಿ ಹದಿಹರೆಯದ ಗರ್ಭಧಾರಣೆಯು 2022 ರಲ್ಲಿ ಶೇ 5.4ಕ್ಕೆ ಇಳಿಕೆಯಾಗಿದೆ ಎಂದು ಇಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.

ಫಿಲಿಪೀನ್ಸ್ನ ಅಂಕಿ ಅಂಶಗಳ ಪ್ರಾಧಿಕಾರ (ಪಿಎಸ್ಎ)ದ ದತ್ತಾಂಶಗಳ ಪ್ರಕಾರ ಹದಿಹರೆಯದವರ ಗರ್ಭಧಾರಣೆಯು ನಗರ ಪ್ರದೇಶಗಳಲ್ಲಿ ಶೇ.4.8ರಷ್ಟು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.6.1ರಷ್ಟಿದೆ. 2017 ರಲ್ಲಿ ಶೇ 8.6ರಷ್ಟು ಗರ್ಭಧಾರಣೆ ಪ್ರಮಾಣ ದಾಖಲಾಗಿದೆ.

19 ವರ್ಷದ ಹೆಣ್ಣು ಮಕ್ಕಳಲ್ಲಿ ಶೇಕಡಾವಾರು ಗರ್ಭಧಾರಣೆಯ ಪ್ರಮಾಣ ಹೆಚ್ಚಾಗಿದೆ. ಶೈಕ್ಷಣಿಕವಾಗಿ ಮುಂದಿರುವ ಮಹಿಳೆರಲ್ಲಿ ಗರ್ಭಧಾರಣೆಯ ಪ್ರಮಾಣ ಕಡೆಮೆಯಾಗಿದೆ. ಆದರೆ ಕೇವಲ ಪ್ರಾಥಮಿಕ ಶಿಕ್ಷಣ ಪಡೆದಿರುವವರಲ್ಲಿ ಗರ್ಭಧಾರಣೆಯು ಶೇ 19.1ರಷ್ಟಿದೆ. ಕಳೆದ ದಶಕದಲ್ಲಿ ಫಿಲಿಪೀನ್ಸ್ನಲ್ಲಿ ಹದಿಹರೆಯದ ಗರ್ಭಧಾರಣೆ ಸಮಸ್ಯೆ ಸುಧಾರಿಸುವ ನಿಟ್ಟಿನಲ್ಲಿ "ರಾಷ್ಟ್ರೀಯ ಸಾಮಾಜಿಕ ತುರ್ತುಸ್ಥಿತಿ" ಎಂದು ಘೋಷಿಸಿತ್ತು.

ಹದಿಹರೆಯಾದ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳ ಮರಣ ಪ್ರಮಾಣವು 25 ರಿಂದ 29 ವರ್ಷ ವಯಸ್ಸಿನ ತಾಯಂದಿರಿಗೆ ಜನಿಸಿದ ಶಿಶುಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ವಯಸ್ಕ ತಾಯಂದಿರಿಗೆ ಹೋಲಿಸಿದರೆ ನವಜಾತ ಶಿಶುಗಳ ಮರಣ ಪ್ರಮಾಣವು 2 ರಿಂದ 5ಪಟ್ಟು ಹೆಚ್ಚಾಗಿರುತ್ತದೆ ಎಂದು ಪಿಎಸ್ಎ ತಿಳಿಸಿದೆ.

ಫಿಲಿಪೀನ್ಸ್ನಲ್ಲಿ ಈ ಸಾಮಾಜಿಕ ಸಮಸ್ಯೆಯು ಕುಟುಂಬಗಳ ದೊಡ್ಡ ಅವಿಭಾಜ್ಯ ಅಂಗವಾಗಿ ಉಳಿದಿದೆ. ಇದರಿಂದ ಬಡತನದ ಶಾಶ್ವತ ಚಕ್ರದಲ್ಲಿ ಸಿಲುಕಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನು ಓದಿ: ಕೋವಿಡ್: ನಿತ್ಯ 36 ಸಾವಿರ ಚೀನಿಯರ ಸಾವು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.