ಲಂಡನ್ : ಪ್ರಚೋದನ್ಮಾತಕ ಹಾಗೂ ಅಸಭ್ಯಕರವಾಗಿ ಚಿತ್ರ ತೆಗೆಯಿಸಿಕೊಳ್ಳಲು ಬಿಬಿಸಿ ವಾಹಿನಿಯ ನಿರೂಪಕರೊಬ್ಬರು ಬಾಲಕನಿಗೆ ಹಣ ನೀಡಿದ್ದಾರೆ ಎಂಬ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಬ್ರಿಟನ್‌ನ ಹಿರಿಯ ರಾಜಕಾರಣಿಗಳು ಸುದ್ದಿಸಂಸ್ಥೆಗೆ ಒತ್ತಾಯಿಸಿದ್ದಾರೆ.

ಸುದ್ದಿಸಂಸ್ಥೆಯ ಪುರುಷ ನಿರೂಪಕರೊಬ್ಬರು 17 ವರ್ಷದ ಬಾಲಕನಿಗೆ 35 ಸಾವಿರ ಪೌಂಡ್ (₹ 36.80 ಲಕ್ಷ) ನೀಡಿದ್ದರು ಎಂದು ಸ್ಥಳೀಯ ‘ಸನ್’ ದಿನಪತ್ರಿಕೆಯು ವರದಿ ಮಾಡಿತ್ತು. ಹಣ ನೀಡಿದ್ದ ಆರೋಪ ಕುರಿತಂತೆ ಬಿಬಿಸಿಯು ಪ್ರಸ್ತುತ ಸಂದಿಗ್ಧ ಸ್ಥಿತಿಯಲ್ಲಿದೆ.

ಆದರೆ, ನಿರೂಪಕ ಅಥವಾ ಬಾಲಕನ ಗುರುತು ಪತ್ತೆಯಾಗಿಲ್ಲ. ಆದರೆ ಆ ನಿರೂಪಕ ಯಾರಿರಬಹುದು ಎಂಬ ಬಗ್ಗೆ ಜಾಲದಾಣಗಳಲ್ಲಿ ವದಂತಿ, ಚರ್ಚೆ ನಡೆದಿದೆ. ಹೀಗಾಗಿ, ಬಿಬಿಸಿಯ ಹೆಸರಾಂತ ನಿರೂಪಕರು ಸ್ವಯಂಪ್ರೇರಿತವಾಗಿ ‘ಆ ನಿರೂಪಕ ನಾನಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಲೈಂಗಿಕತೆಗೆ ಸಮ್ಮತಿ ನೀಡಲು ಕಾನೂನು ಪ್ರಕಾರ ಗರಿಷ್ಠ ವಯೋಮಾನ 16 ವರ್ಷವಾಗಿದೆ. ಆದರೆ, 18 ವರ್ಷದೊಳಗಿನವರನ್ನು ಅಸಭ್ಯ ರೀತಿಯಲ್ಲಿ ಚಿತ್ರ ತೆಗೆಯಿಸಿಕೊಳ್ಳುವಂತೆ ಪ್ರಚೋದಿಸುವುದು ಅಪರಾಧವಾಗಿದೆ.

ಸನ್ ದಿನಪತ್ರಿಕೆಯ ವರದಿ ಪ್ರಕಾರ, ಬಾಲಕನ ತಾಯಿ ಮೇ ತಿಂಗಳಲ್ಲಿಯೇ ಬಿಬಿಸಿ ಸುದ್ದಿಸಂಸ್ಥೆಗೆ ನಿರೂಪಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದಾರೆ. ಆದರೆ, ಈ ದೂರು ಆಧರಿಸಿ ಸುದ್ದಿಸಂಸ್ಥೆಯು ಏನಾದರೂ ಕ್ರಮವಹಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಈ ಬೆಳವಣಿಗೆಗೆ ಕುರಿತು ನೀಡಿರುವ ಹೇಳಿಕೆಯಲ್ಲಿ ಬಿಬಿಸಿಯು, ‘ಸಂಸ್ಥೆಯು ಯಾವುದೇ ರೀತಿಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಹಾಗೂ ಅಂತಹ ಆರೋಪಗಳನ್ನು ಸಕಾರಾತ್ಮಕವಾಗಿ ನಿರ್ವಹಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಸಚಿವೆ ವಿಕ್ಟೋರಿಯ ಅಕಿನ್ಸ್ ಅವರು, ‘ಬಿಬಿಸಿ ವಿರುದ್ಧದ ಆರೋಪಗಳು ಗಂಭೀರವಾದುದು. ಸಾರ್ವಜನಿಕವಾಗಿ ಈ ಬಗ್ಗೆ ಕಳವಳ ಹೆಚ್ಚುತ್ತಿರುವ ಕಾರಣ ಸುದ್ದಿಸಂಸ್ಥೆಯು ತ್ವರಿತವಾಗಿ ಕ್ರಮಕೈಗೊಳ್ಳಬೇಕು. ಅಗತ್ಯ ತನಿಖೆ ನಡೆಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.