ಬ್ರಸೆಲ್ಸ್ (ಬೆಲ್ಜಿಯಂ): ಯುರೋಪ್ ಹಾಗೂ ವಿಶ್ವದ ಇತರ ದೇಶಗಳು ಆರ್ಥಿಕ ಮತ್ತು ರಾಜಕೀಯವಾಗಿ ಚೀನಾವನ್ನುಅತಿಯಾಗಿ ಅವಲಂಬಿಸುವ ಮುನ್ನ ಎರಡೆರಡುಬಾರಿ ಯೋಚಿಸಬೇಕು ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಒತ್ತಾಯಿಸಿದ್ದಾರೆ.

ಚೆಕ್ ಗಣರಾಜ್ಯದ ರಾಜಧಾನಿ ಪ್ರಾಗ್ನಲ್ಲಿ ʼರೇಡಿಯೊ ಫ್ರೀ ಯುರೋಪ್ʼ ಅಕ್ಟೋಬರ್ 27 ರಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ವು,ʼನೀವು ಚೀನಾ ಮೇಲೆ ಅವಲಂಬಿತರಾಗಿದ್ದೇವೆ ಎಂದು ಭಾವಿಸಿದರೆ, ನಿಮ್ಮ ವಿದೇಶಾಂಗ ನೀತಿಯನ್ನು ಬದಲಿಸಿಕೊಳ್ಳಬಹುದು. ನಿಮ್ಮ ಕ್ರಮ ಅಥವಾ ಯೋಜನೆಗಳು, ನಿಮ್ಮನಡವಳಿಕೆಗಳು ಎಚ್ಚರಿಯಿಂದ ಇರಬೇಕು. ಏಕೆಂದರೆ, ನೀವು ನಿಮ್ಮ ವ್ಯವಹಾರದ ಅವಕಾಶಗಳನ್ನು ಅಪಾಯಕ್ಕೆ ಸಿಲುಕಿಸಲು ಬಯಸಬಾರದುʼ ಎಂದು ಹೇಳಿದ್ದಾರೆ.

ಚೀನಾದಿಂದ ಮಿಲಿಟರಿ ಬೆದರಿಕೆಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಯುರೋಪಿಯನ್ ಒಕ್ಕೂಟ ತೈವಾನ್ ಬೆಂಬಲಕ್ಕೆ ನಿಂತಿದೆ.

ಇದರ ಬೆನ್ನಲ್ಲೇ ವು ಅವರು ಯುರೋಪ್ಗೆ ಭೇಟಿ ನೀಡಿರುವುದು,ಮಾನವ ಹಕ್ಕುಗಳ ಉಲ್ಲಂಘನೆ, ಪ್ರಾದೇಶಿಕ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಚೀನಾವನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿರುವ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಜೊತೆಗೆ ಯುರೋಪಿಯನ್ ಒಕ್ಕೂಟ ನಿಲ್ಲಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದೆ ಎಂದು ಟೊರೆಂಟೊ ಮೂಲದ ಚಿಂತಕರ ಚಾವಡಿ ಐಎಫ್ಎಫ್ಆರ್ಎಎಸ್ ವರದಿ ಮಾಡಿದೆ.

ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು, ನೆರೆ ಪ್ರದೇಶಗಳ ಮೇಲಿನ ಚೀನಾದಮಿಲಿಟರಿ ಆಕ್ರಮಣಗಳನ್ನು ಖಂಡಿಸಿವೆ. ಇಂತಹ ಸನ್ನಿವೇಶದಲ್ಲಿ ಯುರೋಪಿಯನ್ ಒಕ್ಕೂಟ ಮಧ್ಯಪ್ರವೇಶಿಸಿರುವುದು ತೈವಾನ್ ಅನ್ನು ಆಕ್ರಮಿಸುವ ಚೀನಾದ ಮಹದಾಸೆಗೆ ತಡೆ ನೀಡಿದೆ ಎಂದೂ ಐಎಫ್ಎಫ್ಆರ್ಎಎಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.