ಲಂಡನ್: 1782-1799ರವರೆಗೆ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನನ ಖಡ್ಗವೊಂದು ಲಂಡನ್ನಲ್ಲಿ ₹3.4 ಕೋಟಿಗೆ ಹರಾಜಾಗಿದೆ.

ಈ ಕುರಿತು ಬೋನ್ಹ್ಯಾಮ್ ಹರಾಜು ಸಂಸ್ಥೆ ಪ್ರಕಟಿಸಿದೆ.

1799ರಲ್ಲಿ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪು ಬಳಸಿದ್ದ ಎನ್ನಲಾದ ಖಡ್ಗವನ್ನು ಯುದ್ಧದಲ್ಲಿ ಸೋತ ಬಳಿಕ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎನ್ನುವವರಿಗೆ ಅಧಿಕಾರಿಗಳು ಉಡುಗೊರೆಯಾಗಿ ನೀಡಿದ್ದರು.

ಈಗ ಡಿಕ್ ವಂಶದವರು ಈ ಖಡ್ಗವನ್ನು ಹರಾಜಿಗಿಟ್ಟಿದ್ದರು. ಖಡ್ಗವು ಕಳೆದ 300 ವರ್ಷಗಳಿಂದ ಡಿಕ್ ಕುಟುಂಬದೊಂದಿಗೆ ಇತ್ತು.

ಖಡ್ಗವು ವಿಶಿಷ್ಟವಾದ ಡುಬ್ರಿ (ಹುಲಿ ಪಟ್ಟೆ) ವಿನ್ಯಾಸವನ್ನು ಹೊಂದಿದೆ, ಇದು ಮೈಸೂರಿನ ಹುಲಿಯ ವಿಶಿಷ್ಟ ಲಕ್ಷಣವಾಗಿದೆ. ಅಲ್ಲದೆ ಟಿಪ್ಪು ಸುಲ್ತಾನನ ತಂದೆ ಹೈದರ್ ಅಲಿಗೆ ಗೌರವ ಸಲ್ಲಿಸಲು ಖಡ್ಗದ ಮೇಲೆ ಅರೇಬಿಕ್ ಅಕ್ಷರ ‘ಹ’ ಅನ್ನು ಚಿನ್ನದಲ್ಲಿ ಕೆತ್ತಲಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.