ಇಸ್ಲಾಮಬಾದ್: ಪೂರ್ವ ಅಘ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಡೆದ ನಿಗೂಢ ಸ್ಫೋಟವೊಂದರಲ್ಲಿ ತೆಹ್ರೀಕ್– ಎ– ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆಯ ಉನ್ನತಮಟ್ಟದ ಕಮಾಂಡರ್ ಒಮರ್ ಖಾಲಿದ್ ಖೊರಾಸಾನಿ ಮತ್ತು ಇತರ ಮೂವರು ಉಗ್ರಗಾಮಿ ನಾಯಕರು ಸಾವಿಗೀಡಾಗಿದ್ದಾರೆ ಎಂದು ಸೋಮವಾರ ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.

ಆಫ್ಘನ್ನ ಅಧಿಕಾರಿಗಳು ಮತ್ತು ಸ್ಥಳೀಯರ ಪ್ರಕಾರ, ಖೊರಾಸಾನಿ ಸೇರಿದಂತೆ ಉಗ್ರರ ಗುಂಪಿನ ಹಿರಿಯ ನಾಯಕರು ಭಾನುವಾರ ವಾಹನದಲ್ಲಿ ತೆರಳುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಇವರನ್ನು ಗುರಿಯಾಗಿಸಿಕೊಂಡು ವಾಹನದಲ್ಲಿ ನಿಗೂಢ ಸ್ಫೋಟಕ ಸಾಧನವನ್ನು ಅಳವಡಿಸಿರಬಹುದು ಎಂದು ಶಂಕಿಸಲಾಗಿದೆ ಎಂದು ‘ದ ಎಕ್ಸ್ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಯು ತನ್ನ ವರದಿಯಲ್ಲಿ ತಿಳಿಸಿದೆ.

ಬಿರ್ಮಲ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಭೆಗೆ ಖೊರಸಾನಿ ಮತ್ತು ಇತರರು ಪ್ರಯಾಣಿಸುತ್ತಿದ್ದ ವಾಹನವು ರಸ್ತೆಯ ಬದಿಯ ಗಣಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.