ಹೊಸ ಕೋವಿಡ್ ಪ್ರಕರಣಗಳ 'ಸುನಾಮಿ'ಯಿಂದ ಜಾಗತಿಕ ಆರೋಗ್ಯ ವ್ಯವಸ್ಥೆಗೆ ಅಡ್ಡಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.

ಈ ಕುರಿತು ಮಾತನಾಡಿರುವ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್, ‘ಹೊಸ ಕೋವಿಡ್ ಪ್ರಕರಣಗಳು ಸುನಾಮಿಯಂತೆ ಹೆಚ್ಚುತ್ತಿವೆ. ಓಮೈಕ್ರಾನ್ ರೂಪಾಂತರದ ಮೂಲಕ ಸೋಂಕು ಹರಡುತ್ತಿದೆ. ಇದು ಜಗತ್ತಿನಾದ್ಯಂತ ಇರುವ ಆರೋಗ್ಯ ವ್ಯವಸ್ಥೆಗಳನ್ನು ಮುಳುಗಿಸಲು ಪ್ರಾರಂಭಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

2021,ಡಿ. 24–2022,ಜ. 2ರನಡುವೆ ಜಾಗತಿಕವಾಗಿ 9.5 ಮಿಲಿಯನ್(90.5 ಲಕ್ಷ) ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ 71ರಷ್ಟು ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಅವಧಿಯಲ್ಲಿ ಸಾವಿಗೀಡಾದ ಸೋಂಕಿತರ ಸಂಖ್ಯೆಯು ಶೇ 10 ಹೆಚ್ಚಳವನ್ನು ಕಂಡಿದೆ ಎಂದು ಡಬ್ಲ್ಯುಎಚ್‌ಒ ಮಾಹಿತಿ ನೀಡಿದೆ.

ಪ್ರಕರಣಗಳ ಏರಿಕೆ ಕುರಿತು ಆತಂಕ ವ್ಯಕ್ತಪಡಿಸಿರುವ ಗೆಬ್ರೆಯೆಸಸ್, ‘ಕಳೆದ ವಾರ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಸರಿಯಾದ ಅಂಕಿ–ಅಂಶವಲ್ಲ ಎಂದು ನಮಗೆ ತಿಳಿದಿದೆ. ಬೆಳಕಿಗೆ ಬಂದಿರುವ ಪ್ರಕರಣಗಳಿಗಿಂತ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ವಾಸ್ತವವಾಗಿ, ಪ್ರಕರಣಗಳ ಸುನಾಮಿ ತುಂಬಾ ದೊಡ್ಡದಾಗಿದೆ ಮತ್ತು ತ್ವರಿತವಾಗಿದೆ’ ಎಂದು ತಿಳಿಸಿದ್ದಾರೆ.

ಇವುಗಳನ್ನೂಓದಿ...

ಫೆಬ್ರುವರಿಯಲ್ಲಿ 3ನೇ ಅಲೆ ಉತ್ತುಂಗಕ್ಕೆ:ಐಐಎಸ್ಸಿಸಂಶೋಧಕರ ಲೆಕ್ಕಾಚಾರ

ಓಮೈಕ್ರಾನ್ ಪ್ರಕರಣ ಹೆಚ್ಚಳ: ಪರೀಕ್ಷೆ ಹೆಚ್ಚಿಸಲು 9 ರಾಜ್ಯಗಳಿಗೆ ಕೇಂದ್ರ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.