ಕೈರೊ: ಇಸ್ರೇಲ್ನ ಉತ್ತರ ನಗರದ ಕೆಸರಿಯಾದಲ್ಲಿರುವ ಪ್ರಧಾನಿ ಬೆಂಜಮನ್ ನೆತನ್ಯಾಹು ನಿವಾಸದ ಮೇಲೆ ಶನಿವಾರ ಬಾಂಬ್ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ ನೆತನ್ಯಾಹು ಅಥವಾ ಅವರ ಕುಟುಂಬದವರು ನಿವಾಸದಲ್ಲಿ ಇರಲಿಲ್ಲ. ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಎಲ್ಲ ಮಿತಿಗಳನ್ನು ಮೀರಿದ ಕೃತ್ಯವಿದು. ಇದನ್ನು ಸಹಿಸಲಾಗದು ಎಂದಿದ್ದಾರೆ.

ಎಕ್ಸ್/ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಪ್ರಧಾನಿ ನೆತನ್ಯಾಹು ಅವರನ್ನು ಹತ್ಯೆಗೆ ಯತ್ನಿಸುತ್ತಿರುವ ಇರಾನ್ ಹಾಗೂ ಅದರ ಬೆಂಬಲಿತ ಪಡೆಗಳು ಈ ಕೃತ್ಯವೆಸಗಿರಬಹುದು' ಎಂದು ಶಂಕಿಸಿದ್ದಾರೆ.

ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೃತ್ಯವನ್ನು ಖಂಡಿಸಿರುವ ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ನೆತನ್ಯಾಹು ನಿವಾಸದ ಮೇಲೆ ಕಳೆದ ತಿಂಗಳು (ಅಕ್ಟೋಬರ್ನಲ್ಲಿ) ಡ್ರೋನ್ ದಾಳಿ ನಡೆದಿತ್ತು.

ಇಸ್ರೇಲ್ ಪಡೆಗಳು ಹಾಗೂ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ನಡುವೆ 2023ರ ಅಕ್ಟೋಬರ್ನಿಂದ ಸಂಘರ್ಷ ನಡೆಯುತ್ತಿದೆ.
.ನೆತನ್ಯಾಹು ನಿವಾಸದ ಮೇಲೆ ದಾಳಿ; ಲೆಬನಾನ್ನಿಂದ ಹಾರಿದ ಮೂರು ಡ್ರೋನ್.ನೆತನ್ಯಾಹು ಹತ್ಯೆಗೆ ಯತ್ನ; ಖಮೇನಿಯನ್ನು ಹೊಡೆಯಲು ದೊರೆತ ಕಾನೂನುಸಮ್ಮತಿ –ಇಸ್ರೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.