ಮಾಸ್ಕೊ: ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್ ಪಡೆಗಳು ಕನಿಷ್ಠ 34 ಡ್ರೋನ್ಗಳನ್ನು ಬಳಸಿ ಭಾನುವಾರ ದಾಳಿ ನಡೆಸಿವೆ. ರಷ್ಯಾ ವಿರುದ್ಧ 2022ರಲ್ಲಿ ಸಮರ ಆರಂಭವಾದ ನಂತರದಲ್ಲಿ, ಮಾಸ್ಕೊ ಮೇಲೆ ನಡೆದಿರುವ ಅತಿದೊಡ್ಡ ಡ್ರೋನ್ ದಾಳಿ ಇದು.

ದಾಳಿಯ ಪರಿಣಾಮವಾಗಿ, ಮಾಸ್ಕೊದ ಮೂರು ಪ್ರಮುಖ ವಿಮಾನ ನಿಲ್ದಾಣಗಳಿಂದ ವಿಮಾನ ಸಂಚಾರವನ್ನು ಬೇರೆಡೆ ತಿರುಗಿಸಲಾಗಿತ್ತು. ದಾಳಿಯಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ.

ರಷ್ಯಾದ ರಕ್ಷಣಾ ವ್ಯವಸ್ಥೆಯು ದೇಶದ ಪಶ್ಚಿಮ ಭಾಗದ ಇತರ ಪ್ರದೇಶಗಳ ಮೇಲೆ ಭಾನುವಾರ ನಡೆದ ದಾಳಿಯ ಭಾಗವಾಗಿದ್ದ 36 ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ಉಕ್ರೇನ್ ಆಡಳಿತವು ವಿಮಾನ ಮಾದರಿಯ ಡ್ರೋನ್ಗಳನ್ನು ಬಳಸಿ ಭಯೋತ್ಪಾದಕ ದಾಳಿ ಎಸಗಲು ನಡೆಸಿದ ಯತ್ನವನ್ನು ವಿಫಲಗೊಳಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಾಸ್ಕೊ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳ ಒಟ್ಟು ಜನಸಂಖ್ಯೆ 2.1 ಕೋಟಿಯಷ್ಟಿದೆ.

ರಷ್ಯಾ ಕಡೆಯಿಂದ 145 ಡ್ರೋನ್ಗಳನ್ನು ಬಳಸಿ ತನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಹೇಳಿದೆ. ಅಲ್ಲದೆ, ದೇಶದ ವಾಯು ರಕ್ಷಣಾ ವ್ಯವಸ್ಥೆಯು 62 ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.