ಲಂಡನ್: ರಾಣಿ ಎಲಿಜಬೆತ್ ಅಂತ್ಯಕ್ರಿಯೆ ನಂತರ ಬ್ರಿಟನ್ ರಾಜಮನೆತನವು ಅವರ ಅಪರೂಪದ ಫೋಟೊವೊಂದನ್ನು ಸೋಮವಾರ ಬಿಡುಗಡೆ ಮಾಡಿದೆ.

2ನೇ ಎಲಿಜಬೆತ್ ಬ್ರಿಟನ್ನ ಅತ್ಯಂತ ದೀರ್ಘಾವಧಿಯ ರಾಣಿ ಎನಿಸಿಕೊಂಡಿದ್ದು, ಸೆ. 8ರ ರಾತ್ರಿ ನಿಧನರಾಗಿದ್ದರು. ಸೋಮವಾರ ಸೇಂಟ್ ಜಾರ್ಜ್ ಚಾಪೇಲ್ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

1971 ರಲ್ಲಿ ಬಾಲ್ಮೋರಲ್ ಎಂಬಲ್ಲಿ ಸೆರೆಹಿಡಿದದ್ದು ಎಂದು ಹೇಳಲಾದ ಚಿತ್ರವನ್ನು ರಾಜಮನೆತನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಈ ಚಿತ್ರಕ್ಕೆ ಶೇಕ್ಸ್ಫಿಯರ್ನ ಹ್ಯಾಮ್ಲೆಟ್ನ ಸಾಲನ್ನು ("May flights of Angels sing thee to thy rest.") ಚಿತ್ರ ಶೀರ್ಷಿಕೆಯನ್ನಾಗಿ ಬಳಸಲಾಗಿದೆ.

ತಾಯಿ (ಎಲಿಜಬೆತ್) ಮರಣದ ನಂತರ ಕಿಂಗ್ ಚಾರ್ಲ್ಸ್ III ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಶೇಕ್ಸ್ಫಿಯರ್ನ ಈ ಸಾಲುಗಳನ್ನು ಉಲ್ಲೇಖಿಸಿದ್ದರು.

ನಂತರ ‘ರಾಣಿಯವರ ಪ್ರೀತಿಯ ನೆನಪಿಗಾಗಿ. 1926 - 2022’ ಎಂದೂ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ರಾಣಿ ಎಲಿಜಬೆತ್ ಅವರು ತಲೆಗೆ ಸ್ಕಾರ್ಫ್ ತೊಟ್ಟು, ಕನ್ನಡಕ ಧರಿಸಿ, ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು, ನಡೆಯುತ್ತಿರುವ ಸನ್ನಿವೇಶವನ್ನು ಕಲಾತ್ಮಕವಾಗಿ ಸೆರೆ ಹಿಡಿಯಲಾಗಿದೆ. ರಾಜ ಮನೆತನ ಹಂಚಿಕೊಂಡಿರುವ ಈ ಚಿತ್ರ ಸದ್ಯ ವೈರಲ್ ಆಗಿದೆ.

ಇವುಗಳನ್ನೂ ಓದಿ...

ರಾಣಿ ಸಾವು: ಮುನಿಸು ಮರೆತು ಒಂದಾಯಿತೇ ರಾಯಲ್ ಫ್ಯಾಮಿಲಿ?

ಬ್ರಿಟನ್ ರಾಣಿ 2ನೇ ಎಲಿಜಬೆತ್ ಬೆಂಗಳೂರಿಗೆ ಭೇಟಿ ನೀಡಿದ್ದ ಅಪರೂಪದ ವಿಡಿಯೊ ನೋಡಿ..

ಜಲಿಯನ್ ವಾಲಾಬಾಗ್ಗೆ ರಾಣಿ ಭೇಟಿ ಕ್ಷಮೆಗಿಂತಲೂ ಮಿಗಿಲು: ಸುಕುಮಾರ್ ಮುಖರ್ಜಿ

‘ಮರುದನಾಯಗಂ’ ಚಿತ್ರೀಕರಣದಲ್ಲಿ ರಾಣಿ ಎಲಿಜಬೆತ್ ಭಾಗಿಯಾಗಿದ್ದರು: ಕಮಲ್ ಹಾಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.