ವಾಷಿಂಗ್ಟನ್: ಸುಮಾರು185 ಜನರ ಸಾವಿಗೆ ಕಾರಣವಾದ ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ರೂವಾರಿ ಐಸಿಸ್ ಖೊರಾಸನ್ ನಾಯಕ ಸನಾವುಲ್ಲಾ ಘಫಾರಿ ಕುರಿತು ಮಾಹಿತಿ ನೀಡಿದವರಿಗೆ 1 ಕೋಟಿ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಆಫ್ಗನ್ ಸರ್ಕಾರವನ್ನು ಅಸ್ಥಿರಗೊಳಿಸಿದ ತಾಲಿಬಾನ್ ಕಳೆದ ವರ್ಷ ಆಗಸ್ಟ್ 14 ರಂದು ದೇಶವನ್ನು ವಶಪಡಿಸಿಕೊಂಡಿತ್ತು. ಆ ಬಳಿಕ ಲಕ್ಷಾಂತರ ಆಫ್ಗನ್ನರು ಮತ್ತು ವಿದೇಶಿಯರು ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನದಲ್ಲಿ ಜಮಾಯಿಸಿದ್ದರು. ಆಗಸ್ಟ್ 26ರಂದು ಅಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ಅಮೆರಿಕದ 13 ಸೈನಿಕರು ಸೇರಿ 185 ಮಂದಿ ಮೃತಪಟ್ಟಿದ್ದರು. ಅಮೆರಿಕದ 18 ಸೈನಿಕರ ಸಹಿತ 150 ಜನರು ಗಾಯಗೊಂಡಿದ್ದರು.

1994ರಲ್ಲಿ ಅಫ್ಗಾನಿಸ್ತಾನದಲ್ಲಿ ಜನಿಸಿದ ಘಫಾರಿ, 2020ರ ಜೂನ್ ನಲ್ಲಿ ಐಸಿಸ್–ಕೆ ನಾಯಕನಾಗಿ ನೇಮಕಗೊಂಡಿದ್ದ. ಇದರ ಎಲ್ಲಾ ಚಟುವಟಿಕೆಯನ್ನು ರೂಪಿಸುವ, ಅನುಮೋದಿಸುವ ಜತೆಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದಾನೆ ಎಂದು ಅಮೆರಿಕದ ರಿವಾರ್ಡ್ ಫಾರ್ ಜಸ್ಟೀಸ್ (ಆರ್ಎಫ್ಜೆ) ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.