ನ್ಯೂರ್ಯಾಕ್: ಅಮೆರಿಕದ ಕೊಲೊರಾಡೊ ನಗರದಲ್ಲಿ ಅಕಾಡೆಮಿ ಬ್ಯಾಂಕಿನಲ್ಲಿ ಲಕ್ಷಾಂತರ ಡಾಲರ್ ನಗದನ್ನು ದರೋಡೆ ಮಾಡಿ ಬೀದಿ ಬೀದಿಗಳಲ್ಲಿತೂರಿ ಜನರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಕೋರುತ್ತಿದ್ದ ವ್ಯಕ್ತಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಎರಡು ದಿನ ಇರುವಾಗಲೇ ಬೀದಿಯಲ್ಲಿ ಹಣ ತೂರಿ ಹ್ಯಾಪಿ ಕ್ರಿಸ್ಮಸ್ ಹೇಳುತ್ತಿದ್ದಬಿಳಿ ಗಡ್ಡದಾರಿ, 65ರ ಹರೆಯದ ಡೇವಿಡ್ ವಾನೆ ಓಲಿವರ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಮೆರಿಕದ ಸ್ಥಳೀಯ ಸುದ್ದಿವಾಹಿನಿ ಕೆಕೆ11 ವರದಿ ಮಾಡಿದೆ.

ಬಂಧಿತ ಆರೋಪಿಓಲಿವರ್ ಬೀದಿಯಲ್ಲಿ ಡಾಲರ್ ತೂರುವುದಕ್ಕೂ ಮುನ್ನ ಇಲ್ಲಿನ ಸ್ಥಳೀಯಅಕಾಡೆಮಿ ಬ್ಯಾಂಕಿನಲ್ಲಿಸಿಬ್ಬಂದಿಗಳಿಗೆ ಬಂದೂಕು ತೋರಿಸಿ ಬೆದರಿಸಿ ನಗದನ್ನು ದರೋಡೆ ಮಾಡಿದ್ದ. ಆರೋಪಿಯಿಂದ ಸಾಕಷ್ಟು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬೀದಿಯಲ್ಲಿ ಡಾಲರ್ ತೂರುವುದನ್ನು ಕಂಡು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವರು ಬೀದಿಯಲ್ಲಿ ಬಿದಿದ್ದ ಡಾಲರ್ ತೆಗೆದುಕೊಂಡು ಬ್ಯಾಂಕಿಗೆ ಮರಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.