ಲೆವಿಸ್ಟನ್ (ಅಮೆರಿಕ): ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್ ನಗರದ ರೆಸ್ಟೋರೆಂಟ್ ಮತ್ತು ‘ಬೌಲಿಂಗ್ ಅಲೈ’ ಕೇಂದ್ರದ ಮೇಲೆ ದಾಳಿ ನಡೆಸಿ 18 ಜನರನ್ನು ಹತ್ಯೆಗೈದಿದ್ದ ಬಂದೂಕುಧಾರಿಯೊಬ್ಬ ಸ್ವಯಂ ಪ್ರೇರಿತವಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಎರಡು ದಿನಗಳಿಂದ ಪೊಲೀಸರು ಆರೋಪಿ ರಾಬರ್ಟ್ ಕಾರ್ಡ್ (40) ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದರು. ಆದರೆ, ಲೆವಿಸ್ಟನ್ ನಗರದಿಂದ 8 ಕಿ.ಮೀ ದೂರದ ಕಾಡಿನಲ್ಲಿ ಕಾರ್ಡ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಏನಿದು ಘಟನೆ?

ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್ ನಗರದ ರೆಸ್ಟೋರೆಂಟ್ ಮತ್ತು ‘ಬೌಲಿಂಗ್ ಅಲೈ’ ಕೇಂದ್ರದ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ್ದ ರಾಬರ್ಟ್ ಕಾರ್ಡ್, ಮನ ಬಂದಂತೆ ಗುಂಡುಗಳನ್ನು ಹಾರಿಸಿ, 18 ಜನರನ್ನು ಹತ್ಯೆಗೈದಿದ್ದ. ಈ ವೇಳೆ ಹಲವು ಮಂದಿ ಗಾಯಗೊಂಡಿದ್ದರು.

ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಮನೆಯಿಂದ ಹೊರಬರದಂತೆ ಪೊಲೀಸರು ಸೂಚನೆ ನೀಡಿದ್ದರು.

ರಾಬರ್ಟ್ ಅನ್ನು ಸೇನಾ ಮೀಸಲು ಪಡೆಯಲ್ಲಿರುವ ಬಂದೂಕು ತರಬೇತುದಾರ ಎಂದು ಪೊಲೀಸ್ ಬುಲೆಟಿನ್‌ನಲ್ಲಿ ಹೇಳಲಾಗಿತ್ತು. ಈತನನ್ನು ಮೈನೆ ರಾಜ್ಯದ ಸಾಕೊದಲ್ಲಿ ತರಬೇತಿ ನೀಡಲು ನಿಯೋಜಿಸಲಾಗಿತ್ತು.

ರಾಬರ್ಟ್ ಅವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 2023ರ ಬೇಸಿಗೆಯಲ್ಲಿ ಎರಡು ವಾರಗಳವರೆಗೆ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.

‘10 ಗುಂಡುಗಳು ಹಾರಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಮೊದಲಿಗೆ ಇದನ್ನು ಬಲೂನ್ ಸಿಡಿತದಿಂದ ಬಂದ ಶಬ್ದ ಎಂದು ಕೊಂಡಿದ್ದೆ. ಆದರೆ, ವ್ಯಕ್ತಿಯೊಬ್ಬ ಆಯುಧ ಹಿಡಿದು ಈ ಕೃತ್ಯ ಎಸಗಿದ್ದನ್ನು ಗಮನಿಸಿದ್ದೇನೆ’ ಎಂದು ಪ್ರತ್ಯಕ್ಷದರ್ಶಿ ಬ್ರಾಂಡನ್ ಎಂಬುವರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

‘ಶಂಕಿತ ವ್ಯಕ್ತಿಯು ತನ್ನ ಭುಜದ ಮೇಲೆ ಆಯುಧ ಎತ್ತಿಕೊಂಡು ಬರುತ್ತಿರುವುದೂ ಸೇರಿದಂತೆ ಎರಡು ಚಿತ್ರಗಳನ್ನು ಆಂಡ್ರೊಸ್ಕೊಗಿನ್ ಕೌಂಟಿಯ ಶೆರಿಫ್ ಕಚೇರಿ ತನ್ನ ಫೇಸ್‌ಬುಕ್ ಪುಟದಲ್ಲಿ ಬಿಡುಗಡೆ ಮಾಡಿತ್ತು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಗವರ್ನರ್ ಜಾನೆಟ್ ಮಿಲ್ಸ್ ಮತ್ತು ರಾಜ್ಯದ ಸೆನೆಟ್ ಸದಸ್ಯರೊಂದಿಗೆ ದೂರವಾಣಿ ಕರೆ ಮಾಡಿ ಘಟನೆಯ ವಿವರ ಪಡೆದಿದ್ದರು.
.ಅಮೆರಿಕದ ಲೆವಿಸ್ಟನ್ ನಗರದಲ್ಲಿ ಗುಂಡಿನ ದಾಳಿ: 16 ಮಂದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.