ವಾಷಿಂಗ್ಟನ್: ಇಸ್ರೇಲ್‌ನ ಎನ್‌ಎಸ್‌ಒ ಕಂಪನಿಯ ಕುತಂತ್ರಾಂಶ ಪೆಗಾಸಸ್ ಮೂಲಕ ಭಾರತದ ಹಲವು ನಾಯಕರು ಮತ್ತು ಪತ್ರಕರ್ತರ ಫೋನ್ ಕದ್ದಾಲಿಕೆ ವಿಚಾರವಾಗಿ ದೊಡ್ಡ ಮಟ್ಟದ ವಿವಾದ ಏರ್ಪಟ್ಟಿರುವ ಸಂದರ್ಭದಲ್ಲೇ ಇಂತಹ ಬೆಳವಣಿಕೆ ಕಳವಳಕಾರಿಯಾಗಿದೆ ಎಂದು ಅಮೆರಿಕ ಅಭಿಪ್ರಾಯ ವ್ಯಕ್ತ ಪಡಿಸಿದೆ.

ನಾಗರಿಕ ಸಮಾಜದ ಮೇಲೆ, ರಾಜಕೀಯ ವಿರೋಧಿಗಳು ಮತ್ತು ಪತ್ರಕರ್ತರ ವಿರುದ್ಧ ಇಂತಹ ತಂತ್ರಾಂಶಗಳ ಮೂಲಕ ಗೂಢಚರ್ಯೆ ನಡೆಸುವುದರ ವಿರುದ್ಧವಿರುವುದಾಗಿ ಅಮೆರಿಕ ಹೇಳಿದೆ. ಆದರೆ ತನ್ನ ಪ್ರತಿಕ್ರಿಯೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಉಲ್ಲೇಖಿಸಿಲ್ಲ.

ಪೆಗಾಸಸ್ ಕುತಂತ್ರಾಂಶದ ಮೂಲಕ ಹಲವು ರಾಷ್ಟ್ರಗಳಲ್ಲಿ ರಾಜಕೀಯ ನಾಯಕರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತಿತರರ ವಿರುದ್ಧ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಭಾರತದಲ್ಲಿ ದೊಡ್ಡ ಮಟ್ಟದ ವಿವಾದವನ್ನು ಹುಟ್ಟು ಹಾಕಿದೆ.

ಕೇರಳದ ಕಡಲಲ್ಲಿ ಭೂಮಿಯ ಅತಿದೊಡ್ಡ ಪ್ರಾಣಿ ನೀಲಿ ತಿಮಿಂಗಿಲ!

ಅಮೆರಿಕದ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾದ ವ್ಯವಹಾರಗಳ ಸಚಿವಾಲಯದ ಸಹ ಕಾರ್ಯದರ್ಶಿ ಡೀನ್ ಥಾಮ್ಸನ್, ಇದೊಂದು ಕಳವಳಕಾರಿ ಬೆಳವಣಿಗೆ. ರಾಷ್ಟ್ರದ ನಾಗರಿಕರ ಮೇಲೆ, ರಾಜಕೀಯ ವಿರುಧಿಗಳು ಮತ್ತು ಪತ್ರಕರ್ತರ ವಿರುದ್ಧ 'ಹೆಚ್ಚುವರಿ ನ್ಯಾಯಾಂಗ'ವಾಗಿ ಇಂತಹ ಕುತಂತ್ರಾಂಶಗಳನ್ನು ಬಳಕೆ ಮಾಡಿ ಗೂಢಚರ್ಯೆ ನಡೆಸುವುದು ಸರಿಯಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.